ಅಸ್ಸಾಂ ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಮನೀಶ್ ಸಿಸೋಡಿಯಾ
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ಹಿಮಂತ ಬಿ ಶರ್ಮಾ
Team Udayavani, Jun 4, 2022, 5:32 PM IST
ನವದೆಹಲಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಆಗಿನ ಆರೋಗ್ಯ ಸಚಿವರಾಗಿದ್ದಾಗ 2020 ರಲ್ಲಿ ತಮ್ಮ ಪತ್ನಿ ಮತ್ತು ಮಗನ ವ್ಯಾಪಾರ ಪಾಲುದಾರ ಕಂಪನಿಗಳಿಗೆ ಪಿಪಿಇ ಕಿಟ್‌ಗಳಿಗಾಗಿ ಸರ್ಕಾರಿ ಆದೇಶಗಳನ್ನು ನೀಡಿದ್ದರು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.
ಚುನಾಯಿತ ಸಿಎಂ ಇಂತಹ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಬಿಜೆಪಿ ಅವರನ್ನು ಕಂಬಿ ಹಿಂದೆ ಹಾಕುತ್ತದೆಯೇ? ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.
ಜೀವ ಉಳಿಸಲು ನನ್ನ ಪತ್ನಿ ಸುಮಾರು 1500 ಪಿಪಿಇ ಕಿಟ್‌ಗಳನ್ನು ಉಚಿತವಾಗಿ ಸರ್ಕಾರಕ್ಕೆ ದಾನ ಮಾಡಿದರು. ಒಮ್ಮೆ ನಾನು ದೆಹಲಿಯ ಶವಾಗಾರದಿಂದ ಅಸ್ಸಾಮಿ ಕೋವಿಡ್ ಬಲಿಪಶುವಿನ ದೇಹವನ್ನು ಪಡೆಯಲು 7 ದಿನಗಳವರೆಗೆ ಕಾಯಬೇಕಾಯಿತು, ನಿಮ್ಮ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಅಸ್ಸಾಂ ಸಿಎಂ ಹಿಮಂತ ಬಿ ಶರ್ಮಾ, ದೆಹಲಿ ಡಿಸಿಎಂ ಸಿಸೋಡಿಯಾ ಅವರ ಆರೋಪಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ.