
ಕುಣಿಕೆಯಿಂದ ಪಾರಾದ ಜಿಗಿಶಾ ಕೊಲೆಗಡುಕರು; ಜೀವಾವಧಿ ಶಿಕ್ಷೆ
Team Udayavani, Jan 4, 2018, 11:30 AM IST

ಹೊಸದಿಲ್ಲಿ : ಜಿಗಿಶಾ ಘೋಷ್ ಕೊಲೆ ಅಪರಾಧಿಗಳಿಗೆ ನೀಡಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಜೀವಾವಧಿ ಜೈಲು ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿದೆ.
ದಿಲ್ಲಿ ಹೈಕೋರ್ಟ್ ಕೃಪೆಯಿಂದಾಗಿ ಇದೀಗ ಕುಣಿಕೆಯಿಂದ ಪಾರಾಗಿರುವ ಕೊಲೆ ಅಪರಾಧಿಗಳೆಂದರೆ ರವಿ ಕಪೂರ್, ಅಮಿತ್ ಶುಕ್ಲಾ ಮತ್ತು ಬಲ್‌ಜೀತ್ ಮಲಿಕ್.
ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ಆಪರಾಧಿಗಳಾದ ಕಪೂರ್, ಶುಕ್ಲಾ ಮತ್ತು ಮಲಿಕ್ ಅವರು ದಿಲ್ಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ವಿಚಾರಣಾ ನ್ಯಾಯಾಲಯ 2016ರ ಜುಲೈ 14ರಂದು ನೀಡಿದ್ದ ಮರಣ ದಂಡನೆಯ ಶಿಕ್ಷೆಯನ್ನು ತೀರ್ಪು ಪ್ರಕಟವಾದಂದಿನಿಂದ 30 ದಿನಗಳ ಒಳಗೆ ದೃಢೀಕರಿಸುವುದಕ್ಕಾಗಿ ಹೈಕೋರ್ಟ್‌ಗೆ ಉಲ್ಲೇಖೀಸಿತ್ತು. ಈ ಕೊಲೆ ಆರೋಪಿಗಳು ಸೌಮ್ಯಾ ವಿಶ್ವನಾಥನ್ ಮರ್ಡರ್ ಕೇಸಿನಲ್ಲೂ ವಿಚಾರಣಾಧೀನ ಕೈದಿಗಳಾಗಿದ್ದರು.
ಹೆವಿಟ್ ಅಸೋಸಿಯೇಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಆಪರೇಶನ್ಸ್ ಮ್ಯಾನೇಜರ್ ಆಗಿದ್ದ 28ರ ಹರೆಯದ ಜಿಗಿಶಾಳನ್ನು 2009ರ ಮಾರ್ಚ್ 18ರಂದು ಅಪಹರಿಸಿ ಕೊಲೆಗೈಯಲಾಗಿತ್ತು. ಅಂದು ನಸುಕಿನ 4 ಗಂಟೆಯ ವೇಳೆಗೆ ಆಕೆಯನ್ನು ಕಂಪೆನಿಯ ಕಾಯಬ್ ಮೂಲಕ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದಲ್ಲಿನ ಆಕೆಯ ಮನೆಯ ಬಳಿ ಡ್ರಾಪ್ ಮಾಡಲಾಗಿತ್ತು.
2009 ಮಾರ್ಚ್ 20ರಂದು ಜಿಗಿಶಾಳ ಶವ ಹರಿಯಾಣದ ಸೂರಜ್‌ಕುಂಡ್ ಸಮೀಪ ಪತ್ತೆಯಾಗಿತ್ತು. ಪೊಲೀಸರು ಈ ಕೊಲೆ ಕೇಸಿಗೆ ಸಂಬಂಧಿಸಿ ಕಪೂರ್, ಶುಕ್ಲಾ ಮತ್ತು ಮಲಿಕ್‌ನನ್ನು ಬಂಧಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
