2080-99ಕ್ಕೆ ತಾಪಮಾನ 5 ಡಿ.ಸೆ. ಹೆಚ್ಚಳ? ಇಂಗಾಲ ಹೊರಸೂಸುವಿಕೆ ದುಪ್ಪಟ್ಟಾದರೆ ಸಂಕಷ್ಟ ಖಚಿತ
ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಸಂಶೋಧನಾ ವರದಿ
Team Udayavani, May 14, 2022, 6:45 AM IST
ನವದೆಹಲಿ: ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿರುವಾಗಲೇ ಗ್ರೀನ್ಪೀಸ್ ಇಂಡಿಯಾ ಹೇಳಿರುವ ಭವಿಷ್ಯವು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
2050ರ ವೇಳೆಗೆ ಜಾಗತಿಕ ಇಂಗಾಲ ಹೊರಸೂಸುವಿಕೆ ಪ್ರಮಾಣವೇನಾದರೂ ದುಪ್ಪಟ್ಟಾದರೆ, 2080-99ರ ಅವಧಿಯಲ್ಲಿ ದೆಹಲಿ ಮತ್ತು ಮುಂಬೈ ವಾರ್ಷಿಕ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಲಿದೆ ಎಂದು ಗ್ರೀನ್ಪೀಸ್ ಸಂಸ್ಥೆಯ ಉಷ್ಣಹವೆಯ ಮುನ್ಸೂಚನೆ ವರದಿ ಹೇಳಿದೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ಸರ್ಕಾರಿ ಸಮಿತಿಯ 6ನೇ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಗ್ರೀನ್ಪೀಸ್ ಈ ವರದಿ ತಯಾರಿಸಿದೆ.
2050ರ ವೇಳೆಗೆ ಜಾಗತಿಕ ಸಿಒ2(ಇಂಗಾಲ) ಹೊರಸೂಸುವಿಕೆ ದುಪ್ಪಟ್ಟಾಗಿದ್ದೇ ಆದಲ್ಲಿ, 2080-99ರ ಅವಧಿಯಲ್ಲಿನ ತಾಪಮಾನವು 1995-2015ರ ಅವಧಿಯಲ್ಲಿದ್ದಿದ್ದಕ್ಕಿಂತ 5 ಡಿ.ಸೆ.ನಷ್ಟು ಹೆಚ್ಚಳವಾಗಲಿದೆ. ದೆಹಲಿಯ ವಾರ್ಷಿಕ ಗರಿಷ್ಠ ತಾಪಮಾನ (1995 -2014ರ ಜೂನ್ ತಿಂಗಳ ಮಧ್ಯದಲ್ಲಿ) 41.93 ಡಿ.ಸೆ.ನಷ್ಟಿದ್ದು, 2080-99ರ ಅವಧಿಯಲ್ಲಿ ಅದು 45.97 ಡಿ.ಸೆ.ಗೆ ಏರಲಿದೆ. ಇದು ಕೆಲವೊಮ್ಮೆ 48.19 ಡಿ.ಸೆ.ವರೆಗೂ ಹೋಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ