ಸ್ಟಾರ್ಟ್‌ಆಪ್‌ ಕಂಪನಿ ಸ್ಥಾಪನೆಯಲ್ಲಿ ದಿಲ್ಲಿ- ಎನ್‌ಸಿಆರ್‌ ಅಗ್ರಗಣ್ಯ ಸ್ಥಾನ

Team Udayavani, Sep 11, 2019, 7:05 PM IST

ಆರ್ಥಿಕತೆ ಹಿಂಜರಿತ ಸಮಸ್ಯೆ ದೇಶದ ಅಭಿವೃದ್ಧಿಯನ್ನು ನುಂಗುತ್ತಿದೆ ಎಂಬ ವಾದ-ವಿವಾದಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ  ನ್ಯಾಶನಲ್ ಕ್ಯಾಪಿಟಲ್ ರೀಜನ್(ಎನ್ ಸಿಆರ್) ಹಾಗೂ ಹೊಸದಿಲ್ಲಿ  ನವೋದ್ಯಮಗಳ ಸ್ಥಾಪನೆ ಮತ್ತು ಅದಕ್ಕೆ ಅಗತ್ಯವಿರುವ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ  ಅಗ್ರಗಣ್ಯ ಸ್ಥಾನ ಪಡೆದಿದೆ.

7,000 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಆಪ್‌ ಕಂಪನಿಗಳು ಸಕ್ರಿಯವಾಗಿದ್ದು, ಅತೀ ಹೆಚ್ಚು ನವೋದ್ಯಮ ಸ್ಥಾಪನೆಗೆ ದೆಹಲಿ ವೇದಿಕೆ ಕಲ್ಪಿಸಿಕೊಡುತ್ತಿದೆ. ದೆಹಲಿ ಹಾಗೂ ಎನ್‌ಸಿಆರ್‌ ಸುತ್ತಲಿನ ಪ್ರದೇಶದಲ್ಲಿ ಒಟ್ಟು  4,491 ನವೋದ್ಯಮ ಕಾರ್ಯನಿರ್ವಹಿಸುತ್ತಿದೆ. ದೆಹಲಿಯ ಪ್ರಮುಖ ನಗರಗಳಾದ ಗುರುಗ್ರಾಮ್‌-1,544 ಹಾಗೂ ನೋಯ್ಡಾ – 1,004 ಸ್ಟಾರ್ಟ್‌ಆಪ್‌ ಕಂಪನಿಗಳು ಇವೆ ಎಂದು ಟೈ(ಟಿಐಇ) ದೆಹಲಿ-ಎನ್‌ಸಿಆರ್‌ ಮತ್ತು ಸಲಹಾ ಸಂಸ್ಥೆ ಜಿನ್ನೋವಾ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ದೇಶದ ಆರ್ಥಿಕ ಸ್ಥಿತಿ ಹದೆಗೆಟ್ಟಿದ್ದು, ವಿನೂತನವಾಗಿ ಪ್ರಾರಂಭವಾಗುವ ಉದ್ಯಮಕ್ಕೆ ಉತ್ತಮ ವೇದಿಕೆಯ ಕೊರತೆ ಇದೆ ಎಂಬ ಅಂಶವನ್ನು ವರದಿ ಉಲ್ಲೇಖ ಮಾಡಿದ್ದು, ಕಳೆದ ಎರಡು ವರ್ಷಗಳಲ್ಲಿ  ಭಾರತದಲ್ಲಿ ಹೊಸ ಸ್ಟಾರ್ಟ್‌ಆಪ್‌ಗಳ ಸಂಖ್ಯೆ ಕುಸಿದಿದೆ ಎಂಬ ಅಂಶ ವರದಿಯಲ್ಲಿದೆ.

2015 ರ ಅಂಕಿ-ಅಂಶಗಳ ಪ್ರಕಾರ ಭಾರತದಾದ್ಯಂತ ಒಟ್ಟು 6,679 ಸ್ಟಾರ್ಟ್‌ಆಪ್‌ ಗಳು ಕಾರ್ಯನಿರ್ವಹಿಸಿದ್ದು,  2016 ರಲ್ಲಿ ಇದರ ಸಂಖ್ಯೆ 5,875 ಕುಸಿದಿತ್ತು. ಹಾಗೇ 2017 ರಲ್ಲಿ  3,478 ನವೋದ್ಯಮಗಳು ಉಳಿದಿಕೊಂಡಿದ್ದು,  2018ರಲ್ಲಿ 2036 ಆಗಿತ್ತು. 2019 ರ ಮೊದಲಾರ್ಧದಲ್ಲಿ ಈ ಸಂಖ್ಯೆ 800 ರಷ್ಟಿದೆ ಎಂದು ವಿವರಿಸಿದೆ.

2009 ರ ಅವಧಿಯಿಂದ 2019 ರವರೆಗೆ ಒಟ್ಟು 7,039 ನವೋದ್ಯಮ ವಾಣಿಜ್ಯ ಕಂಪೆನಿಗಳು ಹುಟ್ಟಿಕೊಂಡಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ  5,324 , ಮುಂಬಯಿನಲ್ಲಿ 3,829, ಹೈದರಾಬಾದ್‌-1940,ಪುಣೆ ನಗರದಲ್ಲಿ  1593 ಹಾಗೂ ಚೆನ್ನೈ ನಲ್ಲಿ 1,520 ಸ್ಟಾರ್ಟ್ ಅಪ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದೆ.

ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ 10 ಯುನಿ ಕಾರ್ನ್ ಗಳಿದ್ದು , ಇದರ ಮೌಲ್ಯ 1 ಬಿಲಿಯನ್‌ ಅಮೆರಿಕನ್ ಡಾಲರ್‌ ಮೌಲ್ಯಕ್ಕೆ ಸಮವಾಗಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಒಂಬತ್ತು, ಮುಂಬೈ ಮತ್ತು ಪುಣೆಯಲ್ಲಿ ತಲಾ ಎರಡು ಮತ್ತು ಚೆನ್ನೈ ನಲ್ಲಿ ಒಂದು ಯುನಿಕಾರ್ನ್ ಗಳು ಇವೆ.  ಹಾಗೇ  ಪ್ರತಿವರ್ಷ ಒಂದು ವಿನೂತನ ಯುನಿಕಾರ್ನ್ ಸಂಸ್ಥೆ  ಪ್ರಾರಂಭವಾಗುತ್ತಿದೆ.

ಬೆಂಗಳೂರು ಐಟಿ ಪರಂಪರೆಗೆ ಹೆಸರಾಗಿದೆ, ಇದರ ಜತೆಗೆ ಬಿ 2 ಬಿ ಮತ್ತು ಬಿ 2 ಸಿ ಸ್ಟಾರ್ಟ್‌ ಆಪ್‌ಗಳಿಗೆ ಬೇಕಾದ ಮೂಲ ಸೌಕರ್ಯದ ಕೊರತೆ ಅಡ್ಡಿಯಾಗಿದೆ. ಮತ್ತೂಂದೆಡೆ ದೆಹಲಿ ಎನ್‌ಸಿಆರ್‌ಟಿ, ಬಿ 2 ಸಿ ಗೆ ಹೆಚ್ಚು ಅನುಕೂಲಕರ ವಾತಾವರಣ ಹೊಂದಿದೆ. ದೆಹಲಿ ಎನ್‌ಸಿಆರ್‌ ಪರವಾಗಿ ಕಾರ್ಯನಿರ್ವಹಿಸುವುದರ ಜತೆಗೆ  ಹೂಡಿಕೆದಾರರು ಉದ್ಯಮ ಸ್ಥಾಪನೆಗೆ ಮೊದಲ ಆದ್ಯತೆ ನೀಡಲು ಅನುಕೂಲವಾಗಿದೆ. ಇದರಿಂದ ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ಸುಲಭವಾಗಿ ಸಿಗುತ್ತಿದೆ. ಭೌಗೋಳಿಕವಾಗಿಯೂ ಯುವ ಬಂಡವಾಳ ಹೂಡಿಕೆದಾರರಿಗೆ ಉದ್ಯಮ ಸ್ಥಾಪನೆಗೆ ಸುಲಭ ದಾರಿಯನ್ನು ಒದಗಿಸಿಕೊಟ್ಟಂತಾಗುತ್ತದೆ ಎಂದು ವೆಂಚರ್‌ ಇಂಟೆಲಿಜೆನ್ಸ್‌ ಸ್ಥಾಪಕ ಅರುಣ್‌ ನಟರಾಜನ್‌ತಿಳಿಸಿದ್ದಾರೆ.

ಹೂಡಿಕೆಯಲ್ಲಿ ದೆಹಲಿ ಎನ್‌ಸಿಆರ್‌ ಇತರ ನಗರಗಳನ್ನು ಹಿಂದಿಕ್ಕಲು ಕಾರಣವಾದ ಅಂಶಗಳ ಬಗ್ಗೆ ಟೈ ದೆಹಲಿ ಎನ್‌ಸಿಆರ್‌ ಕಾರ್ಯನಿರ್ವಾಹಕ ನಿರ್ದೇಶಕಿ ಗೀತಿಕಾ ದಯಾಳ್‌ ಅಭಿಪ್ರಾಯದಂತೆ, ಎನ್‌ಸಿಆರ್‌ 2.5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ತಲಾ ಆದಾಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜೋದ್ಯಮಿಗಳನ್ನು ಹೊಂದಿದೆ. ಈ ಪ್ರದೇಶದ ಜನರು ಹೆಚ್ಚಾಗಿ ವ್ಯಾಪಾರ-ವಹಿವಾಟು ವಿಷಯಗಳಿಗೆ ಒತ್ತು ನೀಡುತ್ತಿದ್ದು, ಅವರಲ್ಲಿ ಸವಾಲು ಸ್ವೀಕರಿಸುವ ಸಾಮರ್ಥ್ಯ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ