ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು
ಟ್ರಾಕ್ಟರ್ ರ‍್ಯಾಲಿಯನ್ನು ನಡೆಸುವ ಬಗ್ಗೆ ರೈತ ಸಂಘದ ಮುಖಂಡರು ಮತ್ತು ದೆಹಲಿ ಪೊಲೀಸರು ಸೌಹಾರ್ದಯುತ ನಿರ್ಧಾರ
Team Udayavani, Jan 24, 2021, 2:35 PM IST
ನವದೆಹಲಿ: ಜನವರಿ 26 ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿಯನ್ನು ನಡೆಸುವ ಬಗ್ಗೆ ರೈತ ಸಂಘದ ಮುಖಂಡರು ದೆಹಲಿ ಪೊಲೀಸರೊಂದಿಗೆ ಚರ್ಚಿಸಿ ಸೌಹಾರ್ದಯುತ ನಿರ್ಧಾರಕ್ಕೆ ಬಂದಿದ್ದಾರೆ.
ಜನವರಿ 23 ರಂದು ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ರೈತರು ಉನ್ನತ ಅಧಿಕಾರಿಗಳನ್ನು ಭೇಟಿಯಾದ ನಂತರ, ಜನವರಿ 26 ರಂದು ಟ್ರ್ಯಾಕ್ಟರ್ ರ‍್ಯಾಲಿಯನ್ನು ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಮಾಡಲು ನಿರ್ಧರಿಸಲಾಯಿತು.
ಸಿಂಘು ಗಡಿ, ಹರಿಯಾಣ ಸಂಜಯ್ ಗಾಂಧಿ ಸಾರಿಗೆ, ಕಾಂಜಾವ್ಲಾ, ಬವಾನಾ, ಆಚಿಂದಿ ಗಡಿ ಮೂಲಕ ಟ್ರ್ಯಾಕ್ಟರ್ ಪೆರೇಡ್ ನಡೆಯಲಿದೆ. ಟಿಕ್ರಿ ಗಡಿಯಿಂದ ಆರಂಭವಾಗುವ ರ‍್ಯಾಲಿ ನಾಗ್ಲೋಯ್, ಧನ್ಸಾ, ಬದ್ಲಿ ಮೂಲಕ ಕೆಎಂಪಿಗೆ ತೆರಳಲಿದೆ.
ಇದನ್ನೂ ಓದಿ : ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಪ್ರತಿಭಟನೆ
ಗಾಜಿಪುರ ಗಡಿಯಿಂದ ಸಾಗುವ ಟ್ರ್ಯಾಕ್ಟರ್ ರ್ಯಾಲಿ ಅಪ್ಸರಾ ಗಡಿಯಿಂದ ದುಹೈ ಯುಪಿ ಮೂಲಕ ಗಾಜಿಯಾಬಾದ್ ಮೂಲಕ ಹಾದುಹೋಗಲಿದೆ. ಹಾಗೆಯೇ ಶಹಜಹಾನ್ಪುರ ಮತ್ತು ಪಾಲ್ವಾಲ್ ನಲ್ಲಿ ರ‍್ಯಾಲಿಯಲ್ಲಿ ರೈತ ಮುಖಂಡರು ತಮ್ಮ ಬೇಡಿಕೆಗಳನ್ನಿಡಲಿದ್ದಾರೆ.
ಸಭೆಯ ನಂತರ ರೈತ ಮುಖಂಡರು, ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯುವುದರ ಬಗ್ಗೆ ದೆಹಲಿ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ದೆಹಲಿಯಲ್ಲಿ 100 ಕಿಲೋಮೀಟರ್ ದೂರ ಟ್ರ್ಯಾಕ್ಟರ್ ಗಣರಾಜ್ಯೋತ್ಸವದ ನಡೆಯಲಿದೆ. ಜನವರಿ 26 ರಂದು ರೈತರು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸುತ್ತಾರೆ, ಬ್ಯಾರಿಕೇಡ್ ಗಳನ್ನು ತೆಗೆದುಹಾಕಲಾಗಿದೆ, ಕೆಲವು ಮಾರ್ಗಗಳನ್ನು ನಿಗದಿಪಡಿಸಲಾಗಿದೆ, ರ‍್ಯಾಲಿಗೆ ಸಂಬಂಧಪಟ್ಟ ಎಲ್ಲಾ ತಯಾರಿಗಳು ನಡೆದಿವೆ” ಎಂದು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಡಾ. ದರ್ಶನ್ ಪಾಲ್, ಗುರ್ನಮ್ ಸಿಂಗ್ ಚಧುನಿ, ಯೋಗೇಂದ್ರ ಯಾದವ್, ಯುಧ್ವೀರ್, ರಮೇಂದ್ರ, ರಣದೀಪ್ ಸಿಂಗ್ ರಾಜ ರಾಜಸ್ಥಾನ್, ಜಸ್ವಿಂದರ್, ಅಭಿಮನ್ಯು ಕೊಹಾದ್, ಕಾಮ್ರೇಡ್ ಕೃಷ್ಣ ಪ್ರಸಾದ್, ತಾಜೇಂದ್ರ ಸಿಂಗ್ ವಿರ್ಕ್ ಉತ್ತರಾಖಂಡ್, ರಾಜೇಂದ್ರ ದೀಪ್ ಮುಂತಾದವರು ಭಾಗವಹಿಸಿದ್ದರು.
ಇದನ್ನೂ ಓದಿ : ‘ಜಿಡಿಪಿ’ಯಲ್ಲಿ ಭಾರಿ ಬೆಳವಣಿಗೆ ಕಂಡಿದೆ : ರಾಹುಲ್ ಟೀಕೆ
ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರ ರಾಕೇಶ್ ಟಿಕೈಟ್, “ರೈತರ ಟ್ರ್ಯಾಕ್ಟರ್ ರ‍್ಯಾಲಿ ಜನವರಿ 26 ರಂದು ನಡೆಯಲಿದೆ, ಲಿಖಿತ ಅನುಮತಿಯನ್ನು ಸಮಿತಿ ಸಲ್ಲಿಸುತ್ತದೆ. ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಮಾತ್ರ ರ‍್ಯಾಲಿ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಈಗಾಗಲೇ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಕೇಂದ್ರದೊಂದಿಗೆ ನಿರಂತರ ಮಾತುಕತೆ ರೈತ ಸಂಘ ನಡೆಸಿದೆ. ರ‍್ಯಾಲಿಯ ನಂತರ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಏತನ್ಮಧ್ಯೆ, ರೈತ ಸಂಘದಿಂದ ಲಿಖಿತ ಕ್ರಮದಲ್ಲಿ ವಿನಂತಿಯ ಪತ್ರ ಬಂದ ನಂತರವೇ ಕಿಸಾನ್ ಟ್ರ್ಯಾಕ್ಟರ್ ರ‍್ಯಾಲಿಯನ್ನು ಅನುಮೋದಿಸುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕನ್ನಡ ಭಾಷೆಯಲ್ಲಿದೆ ಉಜ್ವಲ ಶಕ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?
ಸಿಇಟಿಗೆ ಪಠ್ಯಕಡಿತ, ನೀಟ್ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ
ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ಗೆ 1 ವರ್ಷ ಜೈಲು ಶಿಕ್ಷೆ