ದಿಲ್ಲಿಯಲ್ಲಿ ಭಾರೀ ಶೂಟೌಟ್‌: ಇನಾಮು ಹೊಂದಿದ್ದ ಗ್ಯಾಂಗ್‌ಸ್ಟರ್‌ ಸೆರೆ

Team Udayavani, Feb 6, 2017, 10:59 AM IST

ಹೊಸದಿಲ್ಲಿ : ಇಂದು ಬೆಳಿಗ್ಗೆ ಇಲ್ಲಿನ ನೆಹರೂ ಪ್ಲೇಸ್‌ ಸಮೀಪ ದಿಲ್ಲಿ ಪೊಲೀಸರು ಮತ್ತು ಕ್ರಿಮಿನಲ್‌ಗ‌ಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಂದ ಸೆರೆ‌ ಹಿಡಿಯಲ್ಪಟಿಟರುವ ಗ್ಯಾಂಗ್‌ಸ್ಟರ್‌ ಒಬ್ಟಾತನ ಮೇಲೆ ಈ ಹಿಂದೆ 25,000 ರೂ.ಗಳ ಇನಾಮು ಘೋಷಿಸಲಾಗಿತ್ತು.

ಮಾಧ್ಯಮಗಳ ವರದಿಯ ಪ್ರಕಾರ ಈ ಎನ್‌ಕೌಂಟರ್‌ನಲ್ಲಿ ಸುಮಾರು 13 ಸುತ್ತಗಳ ಗುಂಡಿನ ಹಾರಾಟ ನಡೆದಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಇಬ್ಬರು ಕ್ರಿಮಿನಲ್‌ಗ‌ಳು ಎಂಟು ಸುತ್ತುಗಳ ಗುಂಡಿನ ಹಾರಾಟ ನಡೆಸಿದ್ದಾರೆ. ಇದನ್ನು ಅನುಸರಿಸಿ ಪೊಲೀಸರು ಐದು ಸುತ್ತುಗಳ ಗುಂಡು ಹಾರಾಟ ನಡೆಸಿದ್ದಾರೆ. ತಾವು ಬುಲೆಟ್‌ ಪ್ರೂಫ್ ಜ್ಯಾಕೆಟ್‌ ತೊಟ್ಟಿದ್ದರಿಂದ ಪ್ರಾಣಾಪಾಯವಾಗುವುದು ತಪ್ಪಿತೆಂದು ಪೊಲೀಸರು ಹೇಳಿದ್ದಾರೆ.

ಗುಂಡು ಹಾರಾಟದಲ್ಲಿ ಭಾಗಿಯಾಗಿಉವ ಇಬ್ಬರು ಕ್ರಿಮಿನಲ್‌ಗ‌ಳನ್ನು ಅನುಕ್ರಮವಾಗಿ ಅಕ್‌ಬರ್‌ ಮತ್ತು ಶಾಹಿದ್‌ ಎಂದು ಗುರುತಿಸಲಾಗಿದೆ. ಇವರಲ್ಲಿ  25,000 ರೂ.ಗಳ ಇನಾಮು ಹೊಂದಿದ್ದ ಕ್ರಿನಿನಲ್‌ ಅಕ್‌ಬರ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಶಾಹೀದ್‌ ತಪ್ಪಿಸಿಕೊಂಡಿದ್ದಾನೆ.

ಅಕ್‌ಬರ್‌, ಕೊಲೆ, ದರೋಡೆ, ಕಳವು, ಕೊಲೆ ಯತ್ನ ಮುಂತಾದ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ