ರೈಲಲ್ಲೂ ಕಾರ್ಗಿಲ್‌ ನೆನಪು

ವಿಜಯ ಸ್ಮರಿಸುವ ಮೊದಲ ರೈಲಿಗೆ ಹಸಿರು ನಿಶಾನೆ

Team Udayavani, Jul 16, 2019, 5:48 AM IST

ಹೊಸದಿಲ್ಲಿ: ಕಾರ್ಗಿಲ್‌ ವಿಜಯಕ್ಕೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈಲುಗಳ ಮೇಲೆ ಯುದ್ಧದ ಕುರಿತಾದ ಮಾಹಿತಿ ಹಾಗೂ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ಮೊದಲು ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್‌ ಮೇಲೆ ಕಾರ್ಗಿಲ್‌ ವಿಜಯವನ್ನು ಸ್ಮರಿಸುವ ಚಿತ್ರ ಪ್ರದರ್ಶಿಸಲಾಗುತ್ತದೆ. ಇದಕ್ಕಾಗಿ ಈ ರೈಲಿಗೆ ವಿನೈಲ್‌ ಹಾಳೆಗಳನ್ನು ಅಂಟಿಸಲಾಗುತ್ತದೆ. ಅದರ ಮೇಲೆ ಯುದ್ಧದ ಚಿತ್ರಗಳನ್ನು ಚಿತ್ರಿಸಲಾಗುತ್ತದೆ ಹಾಗೂ ಕಾರ್ಗಿಲ್‌ ವಿಜಯ್‌ ದಿವಸ ಎಂದು ಬರೆಯಲಾಗುತ್ತದೆ. ಇದೇ ರೀತಿ 10 ರೈಲುಗಳ ಮೇಲೂ ಪ್ರದರ್ಶಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೀತಿಯಾಗಿ ಪ್ರದರ್ಶಿಸಿದ ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ರೈಲಿಗೆ ಸೋಮವಾರ ಕೇಂದ್ರ ಸಚಿವ ಹರ್ಷವರ್ಧನ್‌, ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್‌ ಅಂಗಡಿ ಹಾಗೂ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಹೊಸದಿಲ್ಲಿಯಲ್ಲಿ ಹಸಿರು ನಿಶಾನೆ ತೋರಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ