
ರ‍್ಯಾಲಿ ಆಯೋಜಕರ ತನಿಖೆಯಾಗಲಿ: ಫಡ್ನವೀಸ್
Team Udayavani, Nov 22, 2021, 12:08 PM IST

ಮುಂಬಯಿ: ಅಮರಾವತಿ, ನಾಂದೇಡ್ ಮತ್ತು ಮಾಲೆಗಾಂವ್‌ನಲ್ಲಿ ರ್ಯಾಲಿಗಳನ್ನು ಯಾರು ಆಯೋಜಿಸಿದ್ದಾರೆ ಎಂಬುವುದನ್ನು ತನಿಖೆ ನಡೆಸಬೇಕು. ಅದರ ಹಿಂದೆ ಅವರ ಪಾತ್ರವೇನು, ಗಲಭೆ ಎಬ್ಬಿಸಲು ರ್ಯಾಲಿ ಆಯೋಜಿಸಲಾಗಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದಾರೆ.
ತ್ರಿಪುರಾ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಅಮರಾವತಿ, ನಾಂದೇಡ್ ಮತ್ತು ಮಾಲೆಗಾಂವ್‌ನಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆ ರವಿವಾರ ಅಮರಾವತಿಗೆ ಭೇಟಿ ನೀಡಿದ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಅವರ ಅಲ್ಲಿನ ಜನರ ಅಭಿಪ್ರಾಯಗಳನ್ನು ಆಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ನ. 13ರ ಘಟನೆಯನ್ನು ಮಾತ್ರ ಎತ್ತಿ ಹಿಡಿಯಲಾಗುತ್ತಿದೆ. ಅದೇ ನ. 12ರ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನ. 12ರಂದು ಮುಸ್ಲಿಂ ಸಮುದಾಯದ ಜನರು 111 ಸ್ಥಳಗಳಲ್ಲಿ ಜಮಾಯಿಸಿದ್ದರು. ಆದರೆ ಈ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡವು. ಸುಳ್ಳು ಮಾಹಿತಿಯ ಆಧಾರದ ಮೇಲೆ ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ ನ. 12ರಂದು ರ್ಯಾಲಿಯ ಪಿತೂರಿ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.
ನ. 12ರಂದು ಅಮರಾವತಿಯಲ್ಲಿ ರ್ಯಾಲಿ ಪ್ರಾರಂಭವಾಯಿತು. ಈ ಮೆರವಣಿಗೆಗೆ ಕಾರಣವೇನು ಎಂಬುದರ ಬಗ್ಗೆಯೂ ತನಿಖೆಯಾಗಬೇಕು. ಪ್ರತಿಭಟನೆಯ ಬಳಿಕ ಗಲಭೆಕೋರರು ಅಂಗಡಿಗಳು ಮತ್ತು ಜನರನ್ನು ಗುರಿಯಾಗಿಸಿದ್ದರು. ಈ ಗಲಭೆಯ ಪರಿಣಾಮವಾಗಿ ನಿರ್ದಿಷ್ಟ ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಇದರಿಂದ ಅಮರಾವತಿಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ.
ನ. 13ರಂದು ಅಮರಾವತಿಯಲ್ಲಿ ನಡೆದ ಘಟನೆ ನ. 12ರ ಘಟನೆಗೆ ಪ್ರತಿಕ್ರಿಯೆ. ನ. 13ರಂದು ನಡೆದ ಹಿಂಸಾಚಾರವನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಈಗ ಸರಕಾರ, ಅಧಿಕಾರಿಗಳು, ಅಮರಾವತಿಯ ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ಸೇರಿ ನ. 13ರ ಘಟನೆಯನ್ನು ಮಾತ್ರ ಎತ್ತಿ ಹಿಡಿಯುತ್ತಿರುವುದು ತಪ್ಪು. ನಮ್ಮನ್ನು ತಪ್ಪಾಗಿ ಎಳೆದಾಡಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha train ದುರಂತ; ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು:ಅಶ್ವಿನಿ ವೈಷ್ಣವ್

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಬಿಜೆಪಿಯ ದ್ವೇಷದ ಬ್ರಾಂಡನ್ನು ಭಾರತ ತಿರಸ್ಕರಿಸಿದೆ, 2024 ರಲ್ಲೂ ಇದೇ ಆಗಲಿದೆ: ರಾಹುಲ್

Manipur ಹೆದ್ದಾರಿಯಲ್ಲಿನ ದಿಗ್ಬಂಧನಗಳನ್ನು ತೆಗೆಯಿರಿ: ಅಮಿತ್ ಶಾ ವಿನಂತಿ

Odisha Train; ಬೇಸಿಗೆಯಲ್ಲಿ ಛಿದ್ರಗೊಂಡ ದೇಹಗಳನ್ನು ಇಡುವುದು ನಿಜವಾಗಿಯೂ ಕಷ್ಟ!
MUST WATCH

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
