ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಡಿಜಿಸಿಎ
ತಪ್ಪಿದರೆ ವಿಮಾನದಿಂದ ಕೆಳಗೆ ಇಳಿಸಲು ಆದೇಶ
Team Udayavani, Jun 9, 2022, 7:25 AM IST
ಹೊಸದಿಲ್ಲಿ: ಕೊರೊನಾ ಕಡಿಮೆಯಾಯಿತೆಂದು ಮಾಸ್ಕ್ ಇಲ್ಲದೆಯೇ ವಿಮಾನ ಪ್ರಯಾಣ ಮಾಡುವ ಪ್ರಯಾಣಿ ಕರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದೆ. ಇನ್ನು ಮುಂದೆ ದೇಶದ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬುಧವಾರ ಸೂಚನೆ ಹೊರಡಿಸಲಾಗಿದೆ.
ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸ ಬಹುದು, ಮಾಸ್ಕ್ ಧರಿಸಲು ಹಠ ಮಾಡುವ ಪ್ರಯಾಣಿಕರ ಧೋರಣೆ ಯನ್ನು ಅಶಿಸ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬಹುದು ಎಂದು ಸೂಚನೆ ಯಲ್ಲಿ ಹೇಳಲಾಗಿದೆ.
ವಿಮಾನ ಪ್ರಯಾಣಿಕರು ಮತ್ತು ಸಿಬಂದಿಗೆ ಕಠಿನ ನಿಯಮಗಳನ್ನು ಡಿಜಿಸಿಎ ಜಾರಿ ಮಾಡಬೇಕು ಎಂದು ದಿಲ್ಲಿ ಹೈಕೋರ್ಟ್ ಜೂ. 3ರಂದು ಆದೇಶಿಸಿದ ಬೆನ್ನಲ್ಲೇ ಈ ನಿಯಮಗಳನ್ನು ಹೇರಲಾಗಿದೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದಕ್ಕೆಂದು ಪ್ರಕಟನೆ, ಕಣ್ಗಾವಲನ್ನು ಹೆಚ್ಚಿ ಸಲು ಎಲ್ಲ ಏರ್‌ಲೈನ್‌ಗಳಿಗೆ ಸೂಚಿಸಲಾಗಿದೆ.
ದಂಡ ವಿಧಿಸಲು ಅವಕಾಶ: ಸ್ಥಳೀಯ ಪೊಲೀಸರು ಮತ್ತು ರಕ್ಷಣ ಪಡೆಗಳ ಸಹಾಯದೊಂದಿಗೆ ನಿಯಮ ಉಲ್ಲಂ ಸಿ ದವರಿಗೆ ದಂಡ ವಿಧಿಸಬಹುದು ಅಥವಾ ಅವರನ್ನು ಹೆಚ್ಚಿನ ಕ್ರಮಕ್ಕಾಗಿ ರಕ್ಷಣ ಪಡೆಗೆ ಒಪ್ಪಿಸ ಬಹುದು ಎಂದೂ ನಿರ್ದೇಶನಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು