ಉತ್ತರ ನೀಡಲು ಮೂರು ವಾರಗಳ ಅವಕಾಶ: 18 ದಿನಗಳಲ್ಲಿ 8 ಬಾರಿ ಲೋಪ
Team Udayavani, Jul 7, 2022, 7:05 AM IST
ನವದೆಹಲಿ: ಹದಿನೆಂಟು ದಿನಗಳ ಅವಧಿಯಲ್ಲಿ ಎಂಟು ಬಾರಿ ವಿಮಾನಗಳು ಅಪಾಯಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ಗೆ ನಾಗರಿಕ ವಿಮಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಬುಧ ವಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಪ್ರಯಾಣಿಕರ ಸುರಕ್ಷತೆ ಕಾಪಾಡಲು ವಿಮಾನಯಾನ ಕಂಪನಿ ವಿಫಲವಾಗಿದೆ ಎಂದು ಡಿಜಿಸಿಎ ಆರೋಪಿಸಿದೆ.
ವಿಮಾನಗಳನ್ನು ಸರಿಯಾದ ರೀತಿಯಲ್ಲಿ ನಿರ್ವ ಹಣೆ ಮಾಡದೇ ಇದ್ದ ಕಾರಣವೇ ಇಂಥ ಅನ ಪೇಕ್ಷಿತ ಘಟನೆಗಳು ನಡೆಯು ತ್ತಿವೆ. ಅದು ಅಂತಿಮವಾಗಿ ಪ್ರಯಾಣಿಕರಿಗೆ ನೀಡುವ ಸುರಕ್ಷಿತ ಸೇವೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ. ಸ್ಪೈಸ್ ಜೆಟ್‌ಗೆ ಉತ್ತರ ನೀಡಲು ಮೂರು ವಾರಗಳ ಕಾಲಾವಕಾಶವನ್ನೂ ನೀಡಲಾಗಿದೆ.
ಎಚ್ಚರಿಕೆ ವಹಿಸುವೆವು: ನೋಟಿಸ್ ಜಾರಿಯಾಗುತ್ತಲೇ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಮಾತಾಡಿದ ಸ್ಪೈಸ್ ಜೆಟ್ ಸಂಸ್ಥೆಯ ಸಿಎಂಡಿ ಅಜಯ ಸಿಂಗ್ ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ವಾಗ್ಧಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಡಿಜಿಸಿಎ ಜತೆಗೆ ಕಾರ್ಯನಿರ್ವಹಿಸುವುದಾಗಿಯೂ ಅವರು ಹೇಳಿದ್ದಾರೆ. ವಿಮಾನಗಳ ಬಿಡಿಭಾಗದ ಕೊರ ತೆಗೂ 18 ದಿನಗಳಲ್ಲಿ ಉಂಟಾಗಿರುವ ಘಟನೆಗಳಿಗೂ ಸಂಬಂಧವಿಲ್ಲ ಎಂದೂ ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ನಡೆದಿದ್ದ ಮತ್ತೊಂದು ಘಟನೆಯಲ್ಲಿ ಚೀನದ ಚಾಂಗ್‌ಕಿಂಗ್ ತೆರಳುತ್ತಿದ್ದ ಸರಕು ಸಾಗಣೆ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಕೋಲ್ಕತಾಗೆ ವಾಪ ಸಾಗಿದೆ. ಇನ್ನೊಂದೆಡೆ, ಬ್ಯಾಂಕಾಕ್‌ನಿಂದ ಬಂದ ವಿಸ್ತಾರಾ ವಿಮಾನ ದೆಹಲಿ ಏರ್‌ಪೋರ್ಟ್‌ನಲ್ಲಿ ಬುಧವಾರ ಲ್ಯಾಂಡಿಂಗ್ ಆದ ಬೆನ್ನಲ್ಲೇ ಎಂಜಿನ್ ವೈಫಲ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು
ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ
ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು
ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ