Udayavni Special

ಸುಪ್ರೀಂನಲ್ಲಿ ಜಡ್ಜ್ ಕೊಲೆ ಪ್ರತಿಧ್ವನಿ

Team Udayavani, Jul 30, 2021, 7:20 AM IST

Untitled-1

ಹೊಸದಿಲ್ಲಿ: ಝಾರ್ಖಂಡ್‌ನ‌ ಧನ್‌ಬಾದ್‌ ನಗರದಲ್ಲಿ ಬುಧವಾರ ನಡೆದಿದ್ದ “ಹಿಟ್‌-ಆ್ಯಂಡ್‌-ರನ್‌’ ಪ್ರಕರಣಲ್ಲಿ ಮೃತರಾದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಉತ್ತಮ್‌ ಆನಂದ್‌ರ ಪ್ರಕರಣವನ್ನು ತಾವು ಗಮನಿಸುತ್ತಿದ್ದು, ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ನ್ಯಾ| ಆನಂದ್‌ರವರ ಸಾವಿನ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಶನ್‌ ಆಗ್ರಹಿಸಿದ ಹಿನ್ನೆಲೆಯಲ್ಲಿ, ಗುರುವಾರ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿತು. ಕಲಾಪದ ವೇಳೆ ಮಾತನಾಡಿದ ಸಿಜೆಐ ಎನ್‌.ವಿ. ರಮಣ, “ಝಾರ್ಖಂಡ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಾಗಿದೆ. ನಾನೀಗಾಗಲೇ ಅಲ್ಲಿನ ಮುಖ್ಯ ನ್ಯಾಯಮೂರ್ತಿ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ’ ಎಂದರು.

ಆಟೋ ಢಿಕ್ಕಿ ವೀಡಿಯೋ: ಸಿಸಿಟಿವಿ ದೃಶ್ಯಗಳ ಪ್ರಕಾರ, ಬುಧವಾರ ಬೆಳಗಿನ ಜಾವ ಧನಬಾದ್‌ನ ರಸ್ತೆಯ ಪಕ್ಕ  ಜಾಗಿಂಗ್‌ ಮಾಡುತ್ತಿದ್ದ ನ್ಯಾ| ಆನಂದ್‌ ಅವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಪ್ಯಾಸೆಂಜರ್‌ ಆಟೋ ಢಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದೆ. ಇದರ ಆಧಾರದಲ್ಲಿ, ಇದನ್ನು ಆಕಸ್ಮಿಕ ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದ ಪೊಲೀಸರು, ಅನಂತರ ಇದನ್ನು ಕೊಲೆ ಪ್ರಕರಣವೆಂದು ಬದಲಾಯಿಸಿದ್ದಾರೆ. ಮತ್ತೂಂದೆಡೆ, ಪ್ರಕರಣ ಮಾರ್ಪಾಟು ಮಾಡಲು ಪೊಲೀಸರು ಮಂದಗತಿ ಅನುಸರಿಸಿದ್ದಾಗಿ ನ್ಯಾ| ಆನಂದ್‌ ಕುಟುಂಬ ಸದಸ್ಯರು ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಝಾರ್ಖಂಡ್‌ ಮುಖ್ಯ ನ್ಯಾಯಮೂರ್ತಿ ರವಿ ರಂಜನ್‌, “ಈ ಆರೋಪಗಳು ನಿಜವೇ ಆಗಿದ್ದಲ್ಲಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ’ ಎಂದಿದ್ದಾರೆ.

ಇಬ್ಬರ ಬಂಧನ: ಪ್ರಕರಣ ಸಂಬಂಧ, ಝಾರ್ಖಂಡ್‌ ಪೊಲೀಸ್‌ ವಿಶೇಷ ದಳ ಅಪಘಾತ ನಡೆದಾಗ ಆಟೋದಲ್ಲಿದ್ದ ಚಾಲಕ ಹಾಗೂ ಆತನ ಜತೆಯಿದ್ದ ಇನ್ನಿಬ್ಬರನ್ನು ಬಂಧಿಸಿದೆ. ತನಿಖೆಯಲ್ಲಿ ನ್ಯಾ| ಆನಂದ್‌ ಅವರಿಗೆ ಢಿಕ್ಕಿ ಹೊಡೆದ ಆಟೋ ಕೆಲವೇ ಗಂಟೆಗಳ ಹಿಂದೆ ಧನಬಾದ್‌ನಲ್ಲಿ ಕಳುವಾಗಿದ್ದ ಅಂಶ ಬಹಿರಂಗವಾಗಿದ್ದು, ಪ್ರಕರಣ ಜಟಿಲವಾಗಿದೆ. ಇನ್ನು, ನ್ಯಾಯಮೂರ್ತಿಗಳ ಕೊಲೆಗೆ ಅವರು ನಿರ್ವಹಿಸುತ್ತಿದ್ದ ನ್ಯಾಯಾಲಯದ ಪ್ರಕರಣಗಳೇ ಕಾರಣವಿರಬಹುದೆಂಬ ಅನುಮಾನವಿದ್ದು ಪೊಲೀಸರು ಆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

cfghfyhty

ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

ghyht

ಅಂಜನಾದ್ರಿ ಮೂಲಸೌಕರ್ಯ ಮರೀಚಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಪ್ರೀಂ ಕೋರ್ಟ್‌ನ ಇಮೇಲ್‌ನಲ್ಲಿದ್ದ “ಮೋದಿ ಫೋಟೋ’ ತೆಗೆದುಹಾಕಲು ಸೂಚನೆ

ಸುಪ್ರೀಂ ಕೋರ್ಟ್‌ನ ಇಮೇಲ್‌ನಲ್ಲಿದ್ದ “ಮೋದಿ ಫೋಟೋ’ ತೆಗೆದುಹಾಕಲು ಸೂಚನೆ

bharath-band

‘ಭಾರತ್ ಬಂದ್’:ಐಟೆಕ್ ಸಮೀತಿಯಿಂದ ವಿವಿಧ ಕಂಪನಿಗಳ ಪ್ರವೇಶದ್ವಾರದಲ್ಲಿ ಪ್ರತಿಭಟನೆಗೆ ನಿರ್ಧಾರ

charanjit singh channi

ರವಿವಾರ ಪಂಜಾಬ್ ನೂತನ ಸಚಿವ ಸಂಪುಟ ರಚನೆ: ಕ್ಯಾಪ್ಟನ್ ಆತ್ಮೀಯರಿಗೆ ಕೊಕ್ ಸಾಧ್ಯತೆ

ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿ… ಇದರಿಂದ ತೊಂದರೆ ಇಲ್ಲ: ಫಾರೂಖ್ ಅಬ್ದುಲ್ಲಾ

ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿ… ಇದರಿಂದ ತೊಂದರೆ ಇಲ್ಲ: ಫಾರೂಖ್ ಅಬ್ದುಲ್ಲಾ

ಉತ್ತರಪ್ರದೇಶ: ಫಿರೋಜಾಬಾದ್ ನಲ್ಲಿ ಡೆಂಗ್ಯುನಿಂದ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆ

ಉತ್ತರಪ್ರದೇಶ: ಫಿರೋಜಾಬಾದ್ ನಲ್ಲಿ ಡೆಂಗ್ಯುನಿಂದ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆ

MUST WATCH

udayavani youtube

ವಿಶ್ವಸಂಸ್ಥೆಯಲ್ಲಿ ಪ್ರಧಾನ ಮೋದಿ ಭಾಷಣ

udayavani youtube

ಕೇಂದ್ರ ಆಯುಷ್ ಸಚಿವರಿಂದ ವೆನ್‍ಲಾಕ್ ಆಯುಷ್ ಆಸ್ಪತ್ರೆ ಉದ್ಘಾಟನೆ

udayavani youtube

3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವ

udayavani youtube

ಬಿಜೆಪಿ ಸೇವೆ ಮತ್ತು ಸಮರ್ಪಣಾ ಕಾರ್ಯದಲ್ಲಿ ತೊಡಗಿಕೊಂಡಿದೆ : ನಾಗರಾಜ ನಾಯ್ಕ

udayavani youtube

ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ

ಹೊಸ ಸೇರ್ಪಡೆ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.