Udayavni Special

ದೀದಿ-ಸೋನಿಯಾ ಭೇಟಿ :ಮುನಿಸು ಮರೆತು ಬೆರೆತರು


Team Udayavani, Jul 29, 2021, 7:10 AM IST

Untitled-1

ಹೊಸದಿಲ್ಲಿ: ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಮುನಿಸಿಕೊಂಡಿದ್ದ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಮತ್ತೆ ಮೈತ್ರಿಯತ್ತ ಸಾಗಿವೆ. ಹೊಸದಿಲ್ಲಿಯಲ್ಲಿ ಬುಧವಾರ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ನ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವಿನ ಭೇಟಿ ಮತ್ತು ಮಾತುಕತೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಇಬ್ಬರು ಪ್ರಮುಖ ನಾಯಕಿಯರ ಭೇಟಿ ವೇಳೆ, ವಯನಾಡ್‌ ಸಂಸದ ರಾಹುಲ್‌ ಗಾಂಧಿ ಕೂಡ ಉಪಸ್ಥಿತರಿದ್ದರು.

ಅನಂತರ ಮಾತನಾಡಿದ ಮಮತಾ ಬ್ಯಾನರ್ಜಿ “ಸೋನಿಯಾ ಜಿ ಚಹಾ ಸೇವಿಸಲು ಆಹ್ವಾನಿಸಿದ್ದರು. ಅದಕ್ಕನುಸಾರವಾಗಿ ಭೇಟಿ ನೀಡಿದ್ದೆ’ ಎಂದರು. ವಿಪಕ್ಷಗಳೆಲ್ಲವೂ ಒಟ್ಟಾಗಬೇಕಾದ ಬಗ್ಗೆ ನಾವಿಬ್ಬರು ಚರ್ಚೆ ನಡೆಸಿದೆವು. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಬೇಕು ಮತ್ತು ಕೆಲಸ ಮಾಡಬೇಕು ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು ಎಂದು ಹೇಳಿದ್ದಾರೆ. ಒಟ್ಟು 45 ನಿಮಿಷಗಳ ಕಾಲ ನಡೆದಿದ್ದ ಸಭೆಯು ಫ‌ಲಪ್ರದ ಎಂದು ಬಣ್ಣಿಸಿದರು ದೀದಿ. ಮುಂದಿನ ದಿನಗಳಲ್ಲಿ ಇದರ ಫ‌ಲಿತಾಂಶ ಧನಾತ್ಮಕವಾಗಿಯೇ ಇರಲಿದೆ ಎಂದು ಟಿಎಂಸಿ ಅಧಿನಾಯಕಿ ಹೇಳಿಕೊಂಡರು. ಮಮತಾ ಬ್ಯಾನರ್ಜಿ ಒಟ್ಟು ಐದು ದಿನಗಳ ಕಾಲ ರಾಷ್ಟ್ರ ರಾಜಧಾನಿಯ ಪ್ರವಾಸದಲ್ಲಿದ್ದಾರೆ. ಸೋನಿಯಾ ಭೇಟಿ ಬಳಿಕ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜತೆಗೂ ಮಾತುಕತೆ ನಡೆಸಿದ್ದಾರೆ.

ಜೋತಿಷಿ  ಅಲ್ಲ:

ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ 2024ರ ಚುನಾವಣೆಗೆ ಆಟ ಶುರುವಾಗಿದೆ ಎಂದರು. ಪಶ್ಚಿಮ ಬಂಗಾಲಕ್ಕೆ ಸೀಮಿತವಾಗಿದ್ದ ಆಟ ಇನ್ನು ದೇಶಕ್ಕೇ ವಿಸ್ತರಿಸಲಿದೆ ಎಂದರು. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ  ರಚನೆಗೊಳ್ಳಲಿರುವ ವಿಪಕ್ಷಗಳ ಒಕ್ಕೂಟವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಮುಂಚಿತವಾಗಿ ತಿಳಿಸಲು ನಾನು ಜೋತಿಷಿ ಅಲ್ಲ ಎಂದು ಹೇಳಿದ್ದಾರೆ. ಅದನ್ನು ಸಮಯಕ್ಕನು ಸಾರ ವಾಗಿಯೇ ನಿರ್ಧರಿಸಬೇಕಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳಿಗಿಂತ ಸತ್ಯದ ದಿನಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.

ಯಾರಾದರೂ ತೊಂದರೆ ಇಲ್ಲ:

ವಿಪಕ್ಷಗಳ ಒಕ್ಕೂಟವನ್ನು ಯಾರು ಮುನ್ನಡೆಸಿದರೂ ಸ್ವಾಗತವೇ ಎಂದು ಹೇಳಿಕೊಂಡರು ಪಶ್ಚಿಮ ಬಂಗಾಲ ಮುಖ್ಯಮಂತ್ರಿ. ವಿಪಕ್ಷಗಳ ಮುಖಂಡರೆಲ್ಲ ಒಟ್ಟಾಗಿ ಕುಳಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಸಮರ್ಥ ನಾಯಕ ಎಂದು ನಿರ್ಧರಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಚುನಾವಣೆ ಯಲ್ಲಿ ಸ್ಪರ್ಧಿಸಲಿದ್ದರೆ, ಅದು ದೇಶದೊಂದಿಗಿನ ಸ್ಪರ್ಧೆಯೇ ಆಗಿರಲಿದೆ ಎಂದು ಹೇಳಿದ್ದಾರೆ. ಪೆಗಾಸಸ್‌ ವಿವಾದದ ಬಗ್ಗೆ ಮಾತನಾಡಿದ ದೀದಿ, ದೇಶದಲ್ಲಿ ಈಗ ತುರ್ತುಪರಿಸ್ಥಿತಿ ಅವಧಿಯಲ್ಲಿ ಇದ್ದ ದಿನಗಳಿಗಿಂತ ಗಂಭೀರವಾಗಿಯೇ ಇದೆ ಎಂದರು. ಜತೆಗೆ ನನ್ನ ಫೋನ್‌ ಕೂಡ ನಿಗಾಕ್ಕೆ ಒಳಗಾಗಿದೆ ಎಂದು ಹೇಳಿಕೊಂಡರು.

ನಿಗದಿತ ಉದ್ದೇಶದಿಂದ ವಿಪಕ್ಷಗಳು ಸಂಸತ್‌ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸುವ ಬದಲು ಪೆಗಾಸಸ್‌ ವಿಚಾರದ ಬಗ್ಗೆ ಚರ್ಚಿಸಲು ಒತ್ತಾಯ ಮಂಡಿಸಲಾಗುತ್ತಿದೆ. ಅವರ ಧೋರಣೆ ಸರಿಯಲ್ಲ.-ಸಂಭಿತ್‌ ಪಾತ್ರಾ, ಬಿಜೆಪಿ ವಕ್ತಾರ

ದಾಖಲೆ ಹರಿದೆಸೆದರು :

ಲೋಕಸಭೆಯಲ್ಲಿ ಪೆಗಾಸಸ್‌ ವಿವಾದ ಮತ್ತು ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೋಲಾಹಲವೇ ಉಂಟಾಗಿತ್ತು. ಬೆಳಗ್ಗೆ 11ರಿಂದ 12ಗಂಟೆಯ ವರೆಗೆ ಪ್ರತಿಭಟನೆಯ ಘೋಷಣೆಗಳ ನಡುವೆ, ಕಲಾಪ ಮುಂದೂಡದೆ  ಪ್ರಶ್ನೋತ್ತರ ವೇಳೆಯ ಕಲಾಪಗಳು ನಡೆದದ್ದೇ ಒಂದು ಪ್ರಧಾನ ಅಂಶ. ಅನಂತರ ಸಂಸದ ರಾಜೇಂದ್ರ ಅಗರ್ವಾಲ್‌ ಸ್ಪೀಕರ್‌ ಸ್ಥಾನದಲ್ಲಿ ಕುಳಿತು ಕಲಾಪ ನಿರ್ವಹಿಸಲು ಬಂದರು. ಈ ಸಂದರ್ಭದಲ್ಲಿ  ಸದನದ ಕಲಾಪದ ವಿವರಗಳ ದಾಖಲೆಗಳನ್ನು ಮತ್ತು ಪ್ರತಿಭಟನೆಗಾಗಿ ಫ‌ಲಕಗಳನ್ನು ಹರಿದು ಸ್ಪೀಕರ್‌ ಮತ್ತು ಆಡಳಿತ ಪಕ್ಷದ ಸದಸ್ಯರತ್ತ  ಕಾಂಗ್ರೆಸ್‌ ಸಂಸದರಾಗಿರುವ ಗುರ್ಜೀತ್‌ ಅಜುಜಾ, ಟಿ.ಎನ್‌.ಪ್ರತಾಪನ್‌, ಹಿಬಿ ಇಡೆನ್‌ ಮತ್ತು ಇತರರು ಎಸೆದಿದ್ದಾರೆ. ಅವರನ್ನು ಮುಂಗಾರು ಅಧಿವೇಶನದ ಉಳಿದ ಕಲಾಪದಿಂದ ಅಮಾ ನತು ಮಾಡಬೇಕು ಎಂದು ಕೇಂದ್ರ ಸರಕಾರ‌ ಗೊತು ¤ವಳಿ ಮಂಡಿಸುವ ಸಾಧ್ಯತೆ ಇದೆ. ಈ ಗದ್ದಲದ ನಡುವೆಯೇ ದಿವಾಳಿ ತಿದ್ದುಪಡಿ ಮಸೂದೆಯನ್ನು ಚರ್ಚೆ ಇಲ್ಲದೆಯೇ ಲೋಕಸಭೆ ಯಲ್ಲಿ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ಕಲಾಪ ನಡೆಸಲು ವಿಪಕ್ಷಗಳು ಪದೇ ಪದೆ ಅಡ್ಡಿಪಡಿಸಿದವು. ಹೀಗಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಟಾಪ್ ನ್ಯೂಸ್

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6 ತಿಂಗಳ ಜೀವಿತಾವಧಿಯಿದ್ದರೂ, 7 ವರ್ಷ ಪೂರೈಸಿದ ಮಾಮ್‌!

6 ತಿಂಗಳ ಜೀವಿತಾವಧಿಯಿದ್ದರೂ, 7 ವರ್ಷ ಪೂರೈಸಿದ ಮಾಮ್‌!

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

jitin

ಯೋಗಿ ಸಂಪುಟ ವಿಸ್ತರಣೆ: ಕೈ ತೊರೆದಿದ್ದ ಜಿತಿನ್ ಪ್ರಸಾದ್ ಗೆ ಕ್ಯಾಬಿನೆಟ್ ದರ್ಜೆ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

 ನಾರಾಯಣ ಭಟ್‌ ಕೃತಿ ಮೋದಿಗೆ ಮೋದಿಯೇ ಸಾಟಿ; ಸಿಎಂ ಬೊಮ್ಮಾಯಿ ಅವರಿಂದ ಬಿಡುಗಡೆ

 ನಾರಾಯಣ ಭಟ್‌ ಕೃತಿ ಮೋದಿಗೆ ಮೋದಿಯೇ ಸಾಟಿ; ಸಿಎಂ ಬೊಮ್ಮಾಯಿ ಅವರಿಂದ ಬಿಡುಗಡೆ

ya

250 ವರ್ಷ ಹಳೆಯ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆ

ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ ದ.ಕ‌. ಜಿಲ್ಲೆ

ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ ದ.ಕ‌. ಜಿಲ್ಲೆ

ಪೂರ್ಣಗೊಳ್ಳದ ಜಲಸಿರಿ ನಗರಕ್ಕೆ ಬೇಸಗೆಯ ಚಿಂತೆ

ಪೂರ್ಣಗೊಳ್ಳದ ಜಲಸಿರಿ ನಗರಕ್ಕೆ ಬೇಸಗೆಯ ಚಿಂತೆ

ತಂತ್ರಜ್ಞಾನ ಬಳಕೆಯಿಂದ ದೇಶ ಪ್ರಗತಿ: ಡಾ| ಈಶ್ವರ ಪ್ರಸಾದ್‌

ತಂತ್ರಜ್ಞಾನ ಬಳಕೆಯಿಂದ ದೇಶ ಪ್ರಗತಿ: ಡಾ| ಈಶ್ವರ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.