ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿಯ ಹೊಸ ಅನುಕೂಲ

Team Udayavani, Dec 13, 2019, 6:21 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ‘ಸಾಮಾಜಿಕ ಭದ್ರತೆ -2019’ ಮಸೂದೆದಡಿ ಉದ್ಯೋಗಿಗಳ ಗ್ರಾಚ್ಯುಟಿ ಯೋಜನೆಗೆ ಅಗತ್ಯವಾಗಿರುವ ನಿರಂತರ ಸೇವಾವಧಿಯನ್ನು 5 ವರ್ಷಕ್ಕೆ ಇಳಿಸಿರುವ ಕೇಂದ್ರ ಸರಕಾರ, ಗುತ್ತಿಗೆ ಒಪ್ಪಂದದಡಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು 5 ವರ್ಷ ಪೂರೈಸುವ ಮೊದಲೇ ತಮ್ಮ ಗ್ರಾಚ್ಯುಟಿ ಹಣ ಪಡೆಯಬಹುದು ಎಂಬ ಹೊಸ ವಿಚಾರವನ್ನು ಮಸೂದೆಯಲ್ಲಿ ಸೇರಿಸಿದೆ. ಇತ್ತೀಚೆಗೆ ಲೋಕಸಭೆಯಲ್ಲಿ ಮಂಡನೆಯಾಗಿರುವ ಈ ಮಸೂದೆದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉದ್ಯೋಗಿಗಳ ನಿರಂತರ ಸೇವಾವಧಿಯನ್ನು 5 ವರ್ಷಕ್ಕೆ ಇಳಿಸುವ ಪ್ರಸ್ತಾವನೆಯನ್ನು ಈ ಮೊದಲೇ ಸೇರಿಸಲಾಗಿತ್ತು.

ಖಾಸಗಿ ಕಂಪೆನಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವವರಿಗೂ ಈ ನಿಯಮ ಅನ್ವಯವಾಗಬೇಕೆಂದೂ ವಿವರಿಸಲಾಗಿತ್ತು. ಈಗ, ಗುತ್ತಿಗೆ ಉದ್ಯೋಗಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಸರಕಾರ ಮುಂದಾಗಿದೆ. ಇನ್ನುಳಿದಂತೆ, 5 ವರ್ಷಗಳ ನಿರಂತರ ಸೇವೆ ಬಳಿಕ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದರೆ, ಅವಧಿ ಮುಕ್ತಾಯವಾಗಿ ಆತ (ಅಥವಾ ಆಕೆ) ಉದ್ಯೋಗದಿಂದ ಹೊರಬಂದರೆ, 5 ವರ್ಷಗಳ ಸೇವೆಯ ಅನಂತರ ರಾಜೀನಾಮೆ ಸಲ್ಲಿಸಿದರೆ, ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವಿಕಲನಾದರೆ, ಕಾಯಿಲೆಗೆ ತುತ್ತಾದರೆ, ಸೇವಾ ಒಪ್ಪಂದವನ್ನು ಕಂಪೆನಿಯೇ ರದ್ದು ಮಾಡಿದರೆ – ಈ ಎಲ್ಲಾ ಕಾರಣಗಳಲ್ಲೂ ಕಂಪೆನಿಯು ನೌಕರನಿಗೆ ಗ್ರಾಚ್ಯುಟಿ ಹಣ ನೀಡಬೇಕೆಂದು ಮಸೂದೆಯಲ್ಲಿ ಹೇಳಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ