ಹುದ್ದೆ ಕಳಕೊಂಡ ದಿಗ್ವಿಜಯ್ ಸಿಂಗ್
Team Udayavani, May 28, 2018, 2:03 PM IST
ಹೊಸದಿಲ್ಲಿ: ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಈಗ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡಿದ್ದಾರೆ. ಈ ಹಿಂದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಗೋವಾ, ಕರ್ನಾಟಕ , ತೆಲಂಗಾಣದ ಉಸ್ತುವಾರಿ ಹೊತ್ತಿದ್ದ ಅವರನ್ನು ಆ ಹುದ್ದೆಯಿಂದ ಹೊರ ಕಳುಹಿಸಲಾಗಿತ್ತು. ಈಗ ಆಂಧ್ರಪ್ರದೇಶದ ಉಸ್ತುವಾರಿಯಿಂದಲೂ ಅವರನ್ನು ಮುಕ್ತಗೊಳಿಸಲಾಗಿದೆ. ರವಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಆಂಧ್ರ ಉಸ್ತುವಾರಿಯನ್ನು ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರಿಗೆ ವಹಿಸಿದ್ದಾರೆ.
ಇದೇ ವೇಳೆ, ಪಶ್ಚಿಮ ಬಂಗಾಲ ಹಾಗೂ ಅಂಡ ಮಾನ್ ನಿಕೋಬಾರ್ ದ್ವೀಪದ ಕಾಂಗ್ರೆಸ್ ಉಸ್ತುವಾರಿ ಯಾಗಿ ವಕ್ತಾರ ಗೌರವ್ ಗೊಗೋಯಿ ಅವರನ್ನು ನೇಮಕ ಮಾಡಲಾಗಿದೆ.