ಬಿಜೆಪಿ ತೊರೆಯುವ ಸುಳಿವು ನೀಡಿದ ಸಂಸದ ಶತ್ರುಘ್ನ ಸಿನ್ಹಾ
Team Udayavani, Mar 29, 2018, 3:11 PM IST
ಹೊಸದಿಲ್ಲಿ : ತನಗೆ ಸರಿಯಾದ ಸ್ಥಾನಮಾನ ನೀಡದಿರುವ ಕಾರಣಕ್ಕೆ ಅಸಂತೃಪ್ತರಾಗಿರುವ ಬಿಜೆಪಿ ಸಂಸದ, ಮಾಜಿ ಬಾಲಿವುಡ್ ನಟ, ಶತ್ರುಘ್ನ ಸಿನ್ಹಾ ತಾನು ಮುಂದಿನ ವರ್ಷದ ಲೋಕಸಭಾ ಚುನಾವಣೆಯನ್ನು ಬೇರೆ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ನಾಯಕತ್ವಕ್ಕೆ ಬೆದರಿಕೆ ಹಾಕಿದ್ದಾರೆ.
“2019ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ನನಗೆ ಬೇರೆ ಪಕ್ಷಗಳಿಂದ ಆಫರ್ ಇದೆ. 2014ರ ಲೋಕಸಭಾ ಚುನಾವಣೆಯಲ್ಲೇ ನನಗೆ ಬಿಜೆಪಿ ಟಿಕೆಟ್ ಕೊಡಲಾಗುವುದೇ ಇಲ್ಲವೇ ಎಂಬ ವದಂತಿಗಳಿದ್ದವು. ಆದರೂ ಕೊನೆಗೆ ಬಿಜೆಪಿ ಟಿಕೆಟ್ ಸಿಕ್ಕಿತು. ನನ್ನ ಹೆಸರನ್ನು ಕೊನೇ ಕ್ಷಣ ಪ್ರಕಟಿಸಲಾಯಿತು. ಈ ಬಾರಿ ಕೂಡ ನನ್ನ ಬಗ್ಗೆ ಅದೇ ರೀತಿಯ ವದಂತಿಗಳಿವೆ’ ಎಂದು ಸಿನ್ಹಾ ಹೇಳಿದರು.
ನಾನು ಯಾವುದೇ ಪಕ್ಷದ ಟಿಕೆಟ್ ಅಥವಾ ಪಕ್ಷೇತರನಾಗಿಯೇ ಸ್ಪರ್ಧಿಸಲಿ; ನಾನು ಸ್ಪರ್ಧಿಸುವುದಿದ್ದರೆ ನನ್ನ ಕ್ಷೇತ್ರವಾದ ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ ಮಾತ್ರ.ಈ ಕ್ಷೇತ್ರದಿಂದ ನಾನು ದಾಖಲೆಯ ಮತಗಳಿಂದ ಹಿಂದೆ ವಿಜಯಿಯಾಗಿದ್ದೆ. ಮುಂದೆಯೂ ಅದೇ ಸಾಧನೆಯನ್ನು ಮಾಡುವ ವಿಶ್ವಾಸ ನನಗಿದೆ’ ಎಂದು ಶತ್ರುಘ್ನ ಸಿನ್ಹಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ