ಬೀಚ್‌ನಲ್ಲಿ ಸೆಲ್ಪಿ ಕ್ಲಿಕ್ಕಿಸುವ ವೇಳೆ ಕೊಚ್ಚಿ ಹೋದ ವೈದ್ಯೆ

ಗೋವಾದಲ್ಲಿ ನಡೆದ ದುರಂತ

Team Udayavani, May 16, 2019, 3:56 PM IST

ಪಣಜಿ : ಸಮುದ್ರಕ್ಕಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ವೈದ್ಯೆಯೊಬ್ಬರು ಬೃಹತ್‌ ಅಲೆಯ ಹೊಡೆತಕ್ಕೆ ಸಿಲುಕಿ ನೀರುಪಾಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ನೀರು ಪಾಲಾದ ವೈದ್ಯೆ ಆಂಧ್ರದ ಕೃಷ್ಣಾ ಜಿಲ್ಲೆಯ ಜಗ್ಗಯ್ಯ ಪೇಟ್‌ ನಿವಾಸಿ ರಮ್ಯಕೃಷ್ಣನ್‌ ಎನ್ನುವವರಾಗಿದ್ದಾರೆ. ಗೋವಾದಲ್ಲಿ ಇಎಮ್‌ಆರ್‌ಐ ಅಂಬುಲೆನ್ಸ್‌ ಸರ್ವಿಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇಬ್ಬರು ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಜೊತೆಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬೃಹತ್‌ ಅಲೆ ಬಡಿದು ಮೂವರು ನೀರು ಪಾಲಾಗಿದ್ದಾರೆ. ಬೀಚ್‌ನಲ್ಲಿದ್ದವರು ಇಬ್ಬರನ್ನು ಮೊದಲು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯಲ್ಲಿ ಸಾಹಸಪಟ್ಟು ರಮ್ಯ ಕೃಷ್ಣನ್‌ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದು ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ