ವಿಮಾನಕ್ಕೇ ಅಡ್ಡ ಬಂದ ನಾಯಿ!
Team Udayavani, Sep 1, 2019, 6:31 PM IST
ಗೋವಾ: ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನಗಳಿಗೆ ಇತರ ವಾಹನಗಳಿಗೆ ನಾಯಿ ಅಡ್ಡ ಬರುವುದು ಸಾಮಾನ್ಯ. ಆದರೆ ಗೋವಾದಲ್ಲಿ ವಿಮಾನಕ್ಕೇ ನಾಯಿ ಅಡ್ಡ ಬಂದಿದೆ. ಪರಿಣಾಮ ವಿಮಾನ ಟೇಕಾಫ್ ವಿಳಂಬವಾಗಿದೆ.
ಈ ಘಟನೆ ಗೋವಾದ ಐಎನ್ಎಸ್ ಹನ್ಸಾ ವಿಮಾನ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ದೆಹಲಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನ 8.25ಕ್ಕೆ ಟೇಕಾಫ್ ಆಗಬೇಕಿತ್ತು. ಇನ್ನೇನು ರನ್ವೇನಲ್ಲಿ ಬಂದು ನಿಲ್ಲುತ್ತಿರುವಾಗ ನಾಯಿ ಅಡ್ಡ ಬಂದಿದೆ. ಇದು ವಿಮಾನ ಹಾರಾಟ ನಿಯಂತ್ರಣ ಕೊಠಡಿಯವರಿಗೆ ಗೊತ್ತಾಗಿದ್ದು ಬಳಿಕ ವಿಮಾನ ಹಾರಾಟ ನಿಲ್ಲಿಸಿ, ನಾಯಿ ಹಿಡಿಯಲಾಗಿದೆ. ನಾಯಿ ಹೊರಗೆ ತೆಗೆದುಕೊಂಡು ಹೋದ ಬಳಿಕ ವಿಮಾನ ಹಾರಿದೆ. ಅಷ್ಟೊತ್ತಿಗೆ ಗಂಟೆ 9.15 ಆಗಿದೆ.
ಗೋವಾ ವಿಮಾನ ನಿಲ್ದಾಣ ನೌಕಾಪಡೆ ನಿಯಂತ್ರಣದಲ್ಲಿದ್ದು, ಇಲ್ಲಿ ನಾಯಿ ಕಾಟ ಜೋರಾಗಿದೆಯಂತೆ. ಆಗಸ್ಟ್ ತಿಂಗಳಲ್ಲೇ ಇಲ್ಲಿ ಸುಮಾರು 60 ನಾಯಿಗಳನ್ನು ಹಿಡಿಯಲಾಗಿದ್ದು, ಅದನ್ನು ಗೋವಾ ಪಶುಸಂಗೋಪನೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ