ಹೈದರಾಬಾದ್‌ನ ಕೊಂಡಾಪುರದಲ್ಲಿದೆ :ಶ್ವಾನಗಳಿಗಾಗಿ ಆಧುನಿಕ ಪಾರ್ಕ್‌

Team Udayavani, Sep 17, 2018, 10:45 AM IST

1.3 ಎಕರೆ  ಉದ್ಯಾನವನದ ವಿಸ್ತೀರ್ಣ
1.1 ಕೋಟಿ ರೂ. ನಿರ್ಮಾಣಕ್ಕೆ ಖರ್ಚಾದ ಹಣ
2.2 ಲಕ್ಷ  ಫ‌ಲಾನುಭವಿ ಸಾಕು ನಾಯಿಗಳು
ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿರುವ ವಿಭಿನ್ನ ಪ್ರಯತ್ನ
ವಾಕಿಂಗ್‌ ಟ್ರ್ಯಾಕ್‌, ಕ್ಲಿನಿಕ್‌, ಜಿಮ್‌, ಈಜುಕೊಳ ಮುಂತಾದ ಸೌಲಭ್ಯ

ಹೈದರಾಬಾದ್‌: ವಾಕಿಂಗ್‌ಗಾಗಿಯೇ ಪ್ರತ್ಯೇಕ ಟ್ರ್ಯಾಕ್‌, ಶೌಚಾಲಯ, ತುರ್ತು ಸಂದರ್ಭಗಳಿಗಾಗಿ ಶುಶ್ರೂಷಾ ಕೇಂದ್ರ. ಇದ್ಯಾವುದೋ ಸಾರ್ವಜನಿಕರಿಗಾಗಿ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕ ರಿಗೆಂದೇ ನಿರ್ಮಿಸುತ್ತಿರುವ ಉದ್ಯಾನವನ ವಲ್ಲ, ಶ್ವಾನಗಳಿಗಾಗಿ ಹೈದರಾಬಾದ್‌ನ ಕೊಂಡಾ ಪುರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ, ಸರಕಾರದಿಂದ ಅಂಗೀಕೃತಗೊಂಡಿರುವ ಉದ್ಯಾನವನ! 
ಸುಮಾರು 1.3 ಎಕರೆ ವಿಸ್ತೀರ್ಣದಲ್ಲಿ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) 1.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಶ್ವಾನ ಉದ್ಯಾನ, ದೇಶದಲ್ಲೇ ಈ ಮಾದರಿಯ ಮೊದಲ ಪ್ರಯತ್ನವಾಗಿದೆ. 
ವಾಕಿಂಗ್‌ ಟ್ರ್ಯಾಕ್‌, ಶೌಚಾಲಯ, ಕ್ಲಿನಿಕ್‌ ಮಾತ್ರವಲ್ಲದೆ, ಇಲ್ಲಿ ಶ್ವಾನಗಳ ನಿತ್ಯ ವ್ಯಾಯಾಮಕ್ಕಾಗಿ ವಿಶೇಷ ಜಿಮ್‌, ಸ್ವಿಮ್ಮಿಂಗ್‌ ಪೂಲ್‌, ವಿಶ್ರಮಿಸಲು ಎರಡು ವಿಶಾಲ ಲಾನ್‌, ಬಯಲು ರಂಗಮಂದಿರ, ಕೆಫೆ, ದೊಡ್ಡ , ಸಣಕಲು ನಾಯಿಗಳಿಗಾಗಿ ಪ್ರತ್ಯೇಕ ಕೂರುವ ವ್ಯವಸ್ಥೆಗಳಿವೆ. ಹೈದರಾಬಾದ್‌ನ ಪಶ್ಚಿಮ, ಕೇಂದ್ರ ವಲಯಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಸಾಕು ನಾಯಿಗಳಿದ್ದು ಇವುಗಳಿಗೆ ಈ ಪ್ರಯೋಜನ ದೊರಕಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ