ಸೆಕ್ಸ್ಗಾಗಿ ಪೀಡಿಸುತ್ತಿದ್ದ ಆಶ್ರಯದಾತೆಯನ್ನು ಕೊಲೆಗೈದ ಬಾಲಕ!
Team Udayavani, Sep 22, 2017, 1:56 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ಆಶ್ರಯ ನೀಡಿದ್ದ ಮನೆ ಒಡತಿಯನ್ನೇ ಇರಿದು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಮಹಿಳೆ ನಿರಂತರವಾಗಿ ಸೆಕ್ಸ್ಗೆ ಪೀಡಿಸುತ್ತಿದ್ದುದೆ ಹತ್ಯೆಗೈಯಲು ಕಾರಣ ಎಂದು ಬಾಲಕ ಹೇಳಿಕೊಂಡಿದ್ದಾನೆ.
ಲಜ್ಪತ್ನಗರದ ಸಂಗಮ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಸಹೀಬಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯ ಬಳಿಕ ರಕ್ತ ಸಿಕ್ತ ಕೈಗಳ ಸಮೇತ ಬಾಲಕ ಠಾಣೆಗೆ ಆಗಮಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿರಂತರ ಸೆಕ್ಸ್ ಬೇಡಿಕೆಯಿಂದ ದಿಕ್ಕು ತೋಚದಂತಾಗಿದ್ದ ಬಾಲಕ ಒಡತಿಯನ್ನು ಕೊಲೆ ಮಾಡಲು ಸಿದ್ಧವಾಗಿ, ಆಕೆ ಟಿವಿ ನೋಡುತ್ತಿದ್ದ ವೇಳೆ ಸಮಯ ಸಾಧಿಸಿ ಬರ್ಬರವಾಗಿ ಕತ್ತು ಸೀಳಿ ಕೊಲೆಗೈದಿದ್ದಾನೆ. ಬಳಿಕ ಜೋರಾಗಿ ಅಳುತ್ತಾ ಠಾಣೆಗೆ ಓಡಿ ಬಂದು ಶರಣಾಗಿದ್ದಾನೆ.
ಕೂಡಲೇ ಪೊಲೀಸರು ಬಾಲಕನ ಸಮೇತ ನಿವಾಸಕ್ಕೆ ದೌಡಾಯಿಸಿದ್ದು ,ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡಿದ್ದಾರೆ.ಈ ವೇಳೆ ಪಕ್ಕದಲ್ಲೇ 2 ವರ್ಷದ ಹೆಣ್ಣು ಮಗು ನಿದ್ರೆಯಲ್ಲಿತ್ತು.
ಘಟನೆ ನಡೆಯುವ ವೇಳೆ ಮಹಿಳೆಯ ಪತಿ ಕೆಲಸಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಬಾಲಕ ನಿರುದ್ಯೋಗಿಯಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಆತನನ್ನು ಕರೆತಂದು ಮನೆಯಲ್ಲಿ ಆಶ್ರಯ ನೀಡಿ ಮನೆಗೆಲಸದಲ್ಲಿ ಸಹಾಯ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ