ಟ್ರಂಪ್ ಭೇಟಿ ವೆಚ್ಚ 100 ಕೋಟಿ ರೂ. ಅಲ್ಲ; ಮತ್ತೆ ಎಷ್ಟು ಗೊತ್ತೇ?
Team Udayavani, Feb 29, 2020, 1:06 PM IST
ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಗುಜರಾತ್ ಸರಕಾರ 100 ಕೋಟಿ ರೂ. ವೆಚ್ಚ ಮಾಡಿದೆ ಎಂಬ ವರದಿಯನ್ನು ಸಿಎಂ ವಿಜಯ್ ರೂಪಾಣಿ ತಳ್ಳಿಹಾಕಿದ್ದಾರೆ.
ಜತೆಗೆ, ಟ್ರಂಪ್ ಭೇಟಿಗೆ ಆಗಿರುವುದು 12.5 ಕೋಟಿ ರೂ. ವೆಚ್ಚ ಎಂದೂ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರಕಾರ 8 ಕೋಟಿ ಮತ್ತು ಅಹಮದಾಬಾದ್ ಮಹಾನಗರ ಪಾಲಿಕೆ 4.5 ಕೋಟಿ ರೂ. ನೀಡಿತ್ತು ಎಂದಿದ್ದಾರೆ.