ಮಕ್ಕಳ ಜತೆಗೆ ಮೆಲಾನಿಯಾ ಮಾತು
Team Udayavani, Feb 26, 2020, 7:29 AM IST
‘ಅಮೆರಿಕ ಎಷ್ಟು ದೊಡ್ಡದಿದೆ?’…. “ಭಾರತದಿಂದ ಅಮೆರಿಕ ತುಂಬಾ ದೂರಾನಾ?’… ಇವು ದಿಲ್ಲಿಯ ಸರಕಾರಿ ಶಾಲೆಯಲ್ಲಿ ಪ್ರೀ-ನರ್ಸರಿಯಲ್ಲಿ ಕಲಿಯುತ್ತಿರುವ ಪುಟಾಣಿ ಮಕ್ಕಳ ಪ್ರಶ್ನೆಗಳು. ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರು ಬುಧವಾರ ದಿಲ್ಲಿಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಮಕ್ಕಳು ಕೇಳಿದ ಇಂಥ ಮುಗ್ಧ ಪ್ರಶ್ನೆಗಳಿಗೆ ನಸುನಗುತ್ತಾ ಉತ್ತರಿಸಿದರು.
ಮೊದಲಿಗೆ, ನರ್ಸರಿ ವಿಭಾಗದ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ಚಟುವಟಿಕೆ ಕೊಠಡಿಗೆ ತೆರಳಿದರು. ಪುಟಾಣಿಗಳ ಒಂದು ಗುಂಪು ಜೇಡಿಮಣ್ಣಿನ ಆಕೃತಿಗಳನ್ನು ತಯಾರಿಸುತ್ತಿತ್ತು. ಅವರೊಂದಿಗೆ ಸೇರಿ, ಕೆಲವಾರು ಆಕೃತಿಗಳನ್ನು ತಯಾರಿಸಿದರು.
ಅನಂತರ ಬಿಲ್ಡಿಂಗ್ ಬ್ಲಾಕ್ಸ್ ಆಟಿಕೆಗಳಿಂದ ಆಡುತ್ತಿದ್ದ ಬೇರೊಂದು ವಯೋಮಾನದ ಮಕ್ಕಳನ್ನು ಮಾತನಾಡಿಸಿದರು. ಅಲ್ಲೊಬ್ಬ ಪುಟಾಣಿ ಹೆಣ್ಣುಮಗು, ಅಮೆರಿಕದ ಅಧ್ಯಕ್ಷರ ಪತ್ನಿಯಾಗಿ ನಿಮ್ಮ ಕರ್ತವ್ಯವೇನು ಎಂಬ ದೊಡ್ಡ ಪ್ರಶ್ನೆಯನ್ನೇ ಕೇಳಿತು. ಅದಕ್ಕೆ ಉತ್ತರ ನೀಡಿದರು.
ಮಕ್ಕಳೊಂದಿಗೆ ಮಾತನಾಡಿ ಮನಸ್ಸು ಹಗುರಾಯಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 2018ರಲ್ಲಿ ದಿಲ್ಲಿ ಸಿಎಂ ಕೇಜ್ರಿವಾಲ್ರ ಹ್ಯಾಪಿನೆಸ್ ಕ್ಲಾಸ್ ಎಂಬ ಪರಿಕಲ್ಪನೆಯಡಿ ಅದೇ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ