ಕ್ಯಾನ್ಸರ್ ರೋಗಿ ಗಳಿಗೆ ಬದುಕು ನೀಡಿದ ಡಾ| ಶಾಂತಾ ನಿಧನ
Team Udayavani, Jan 20, 2021, 1:30 AM IST
ಚೆನ್ನೈ: ಸುಮಾರು ಐದು ದಶಕಗಳವರೆಗೆ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಬೃಹತ್ ಯೋಗದಾನ ನೀಡಿದ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಡಿ.ವಿ. ಶಾಂತಾ(93) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಈ ಹಿರಿಯ ಜೀವದ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕ್ಯಾನ್ಸರ್ ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಶಾಂತಾ ಅವರಿಗೆ ಗೌರವ ಸಲ್ಲಿಸಲು, ಅವರ ಅಂತ್ಯ ಕ್ರಿಯೆಯ ವೇಳೆ ತೋಪು ಹಾರಿಸಿ ಗೌರವ ಸಲ್ಲಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಬಡ ಕ್ಯಾನ್ಸರ್ ರೋಗಿಗಳಿಗೆ ಆರೈಕೆಗಾಗಿ ಡಾ| ಶಾಂತಾ ಅವರು, 12 ಹಾಸಿಗೆಗಳ ಚಿಕ್ಕ ಆಸ್ಪತ್ರೆ ಆರಂಭಿಸಿದ್ದು, ಇದು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತು, ಇದುವರೆಗೂ ಸಹಸ್ರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದೆ.