ಈ ನಗರದಲ್ಲಿ ಸೊಳ್ಳೆ ಸಂಹಾರಕ್ಕೆ ಬಳಸುತ್ತಾರೆ ಡ್ರೋನ್ !

Team Udayavani, Nov 22, 2019, 11:21 PM IST

ಕೋಲ್ಕತ್ತಾ: ಸೊಳ್ಳೆಗಳನ್ನು ಕೊಲ್ಲಲು ಯಾರಾದರೂ ಡ್ರೋನ್‌ ಬಳಸಿದ್ದನ್ನು ಕೇಳಿದ್ದೀರಾ? ಕೋಲ್ಕತ್ತಾ ನಗರಸಭೆ ಇಂಥದ್ದೊಂದು ನಿರ್ಧಾರ ಮಾಡಿದೆ. ಡ್ರೋನ್‌ಗಳ ಮೂಲಕ ಸೊಳ್ಳೆಗಳ ಸಂಹಾರಕ್ಕೆ ನಗರಸಭೆ ಮುಂದಾಗಿದೆ.

ಅದರಂತೆ, ಸೊಳ್ಳೆಗಳ ವಂಶಾಭಿವೃದ್ಧಿ ಆಗುತ್ತಿರುವ ಸ್ಥಳಗಳ ಚಿತ್ರಗಳನ್ನು ಮೊದಲು ಡ್ರೋನ್‌ ಸೆರೆಹಿಡಿಯುತ್ತದೆ. ಜತೆಗೆ, ಅಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ, ಕೀಟನಾಶಕವನ್ನು ಕೂಡ ಸಿಂಪಡಿಸುತ್ತದೆ. ಈ ಡ್ರೋನ್‌ ಹೆಸರು “ವಿನಾಶ್‌’. ಇದನ್ನು ಸೊಳ್ಳೆ ನಿಯಂತ್ರಣಕ್ಕೆಂದೇ ಅಭಿವೃದ್ಧಿಪಡಿಸಲಾಗಿದೆ. ಈ ಡ್ರೋನ್‌ನ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದೆ. ಅದು ಸಾಕಷ್ಟು ಯಶಸ್ವಿಯಾಗಿದೆ ಎಂದು ಕೋಲ್ಕತ್ತಾ ಉಪ ಮೇಯರ್‌ ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ಈ ವರ್ಷ ಡೆಂ à ಜ್ವರ ಹೆಚ್ಚು ಜನರನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ