ದಿಲ್ಲಿ: ಡ್ರೋನ್, ಪ್ಯಾರಾ ಗ್ಲೆ„ಡರ್, ಹಾಟ್ ಬಲೂನ್ಗೆ ನಿಷೇಧ
Team Udayavani, Jul 24, 2018, 4:26 PM IST
ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆ ಸನ್ನಿಹಿತವಾಗುತ್ತಿರುವಂತೆಯೇ ದಿಲ್ಲಿ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ಡ್ರೋನ್ ಮತ್ತು ಪ್ಯಾರಾ ಗ್ಲೆ„ಡರ್ಗಳ ಹಾರಾಟವನ್ನು ನಿಷೇಧಿಸಿದ್ದಾರೆ.
ದಿಲ್ಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಅವರು ಹೊರಡಿಸಿರುವ ಅಧಿಸೂಚನೆಯು ದಿಲ್ಲಿ ಆಗಸದಲ್ಲಿ ಜುಲೈ 25ರಿಂದ ಆಗಸ್ಟ್ 15ರ ವರೆಗಿನ ಅವಧಿಯಲ್ಲಿ ಡ್ರೋನ್ ಮತ್ತು ಪ್ಯಾರಾಗ್ಲೆ„ಡರ್ಗಳು ಮಾತ್ರವಲ್ಲದೆ ಹಾಟ್ ಬಲೂನ್ಗಳ ಹಾರಾಟದ ಮೇಲೆ ನಿಷೇಧ ಹೇರಿದೆ.
ಭಯೋತ್ಪಾಕದರ ಸಂಭಾವ್ಯ ದಾಳಿ, ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಇತ್ಯಾದಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ನಿಷೇಧವನ್ನು ಹೇರಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.