ದ್ವಾರಕಾಮಯಿ ಗೋಡೆಯಲ್ಲಿ ಭಕ್ತರಿಗೆ ಶಿರಡಿ ಸಾಯಿ ಬಾಬಾ ದರ್ಶನ; ಪವಾಡ ಎಂದ ಭಕ್ತರು

Team Udayavani, Jul 12, 2019, 5:09 PM IST

ಶಿರಡಿ : ಮಹಾರಾಷ್ಟ್ರದ ಶಿರಡಿ ಜಿಲ್ಲೆಯಲ್ಲಿ ಸಾಯಿಬಾಬಾ ಅವರ ಸಮಾಧಿಗೆ ಸನಿಹದಲ್ಲೇ ಇರುವ, ಬಾಬಾ ಅವರು ತಮ್ಮ ಜೀವಿತದ ಕಾಲದ ಬಹುಭಾಗವನ್ನು ಕಳೆದಿರುವ, ದ್ವಾರಕಾಮಯೀ ಮಸೀದಿಯ ಗೋಡೆಯಲ್ಲಿ ಬಾಬಾ ಅವರ ಅಸ್ಪಷ್ಟ ರೂಪವನ್ನು ತಾವು ಕಂಡು ದರ್ಶನ ಪಡೆದಿರುವುದಾಗಿ ಭಕ್ತರು ಹೇಳಿದ್ದಾರೆ.

ಶಿರಡಿ ಸಾಯಿ ಬಾಬಾ ಅವರ ಲಕ್ಷಾಂತರ ಭಕ್ತರು ಇದನ್ನೊಂದು ಪವಾಡವೆಂದು ವರ್ಣಿಸಿದ್ದಾರೆ.

ಗುರುವಾರ ರಾತ್ರಿ ಸುಮಾರು 11.30ರ ಹೊತ್ತಿಗೆ ವಿಶೇಷ ಆರತಿ ಪೂಜೆ ನಡೆಯುತ್ತಿದ್ದಾಗ ಈ ಪವಾಡ ಸದೃಶ ಘಟನೆ ನಡೆಯಿತೆಂದು ವರದಿಗಳು ತಿಳಿಸಿವೆ.

ವಿಶೇಷ ಆರತಿ ಪೂಜೆಯ ವೇಳೆ ಉಪಸ್ಥಿತರಿದ್ದ ಅನೇಕ ಭಕ್ತರು ತಾವು ಗೋಡೆಯ ಮೇಲೆ ಬಾಬಾ ಅವರ ಅಸ್ಪಷ್ಟ ರೂಪವನ್ನು ಕಂಡೆವೆಂದು ಹೇಳಿದ್ದಾರೆ.

ತಮಗೆ ಕಂಡು ಬಂದ ಬಾಬಾ ಅವರ ಅಸ್ಪಷ್ಟ ರೂಪದಲ್ಲಿ ಅವರು ಮುಗುಳ್ನಗು ಬೀರುತ್ತಿದ್ದರು ಎಂದು ಭಕ್ತರು ಹೇಳಿದ್ದಾರೆ. ಬಾಬಾ ಅವರ ಈ ದರ್ಶನ ಸ್ವಲ್ಪಕಾಲ ಗೋಡೆಯ ಮೇಲೆ ಕಂಡು ಬಂದಿತ್ತು ಎಂದವರು ಹೇಳಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ