ಇ-ವೋಚರ್ ನೀಡಿ ಲೋಕ ಕಲ್ಯಾಣ ಮಾಡಿ
Team Udayavani, Jun 11, 2021, 7:50 AM IST
ಹೊಸದಿಲ್ಲಿ: ಆರ್ಥಿಕವಾಗಿ ದುರ್ಬಲ ವರ್ಗದವರು ಲಸಿಕೆ ಪಡೆಯಲು ಉಳ್ಳವರು ನೆರವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಇ-ವೋಚರ್ ಪರಿಚಯಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಈ ಇ-ವೋಚರ್ ಸೌಲಭ್ಯ ಪರಿಚಯಿಸಿದ್ದು, ಹಣವಿರುವವರು ಲೋಕ ಕಲ್ಯಾಣಾರ್ಥವಾಗಿ ಆರ್ಥಿಕವಾಗಿ ದುರ್ಬಲರಿಗೆ ಲಸಿಕೆ ಹಾಕಿಸಲಿ ಎಂದು ಕರೆ ನೀಡಿದ್ದಾರೆ.
ಇ-ವೋಚರ್ ಎಂದರೇನು? :
ಇದು ಎಲೆಕ್ಟ್ರಾನಿಕ್ ವೋಚರ್. ಆರ್ಥಿಕವಾಗಿ ದುರ್ಬಲರ ಅನುಕೂಲಕ್ಕಾಗಿ ಹಣವಿರುವವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಖರೀದಿಸಿ ಒದಗಿಸುವುದು. ಇದರಲ್ಲಿ ಲಸಿಕೆ ಪಡೆಯುವ ಸಮಯ ನಮೂದಿಸಲಾಗಿರುತ್ತದೆ. ಇದನ್ನು ಗಿಫ್ಟ್ ವೋಚರ್ ಆಗಿ ಬಡವರಿಗೆ ನೀಡಬಹುದು.
ಇ-ವೋಚರ್ ದರವೆಷ್ಟು? :
ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯ ದರವನ್ನೇ ನೀಡಬೇಕು. ಅಂದರೆ ಕೊವಿಶೀಲ್ಡ್‌ಗೆ 780 ರೂ., ಕೊವ್ಯಾಕ್ಸಿನ್‌ಗೆ 1,410 ಮತ್ತು ಸ್ಪುಟ್ನಿಕ್ ವಿಗೆ 1,145 ರೂ. ಇದರಲ್ಲಿ ನೀವು ಕೊಡಿಸುವ ಲಸಿಕೆಯ ದರವನ್ನು ನೀಡಿ ಇ-ವೋಚರ್ ಖರೀದಿಸಬೇಕು.
ಇ-ವೋಚರ್ ಖರೀದಿ ಹೇಗೆ? :
ಸದ್ಯ ಕೇಂದ್ರ ಸರಕಾರ ಇ-ವೋಚರ್ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಇದನ್ನು ಮೊಬೈಲ್ ಫೋನ್‌ನಲ್ಲಿ ಖರೀದಿಸಿ, ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಇದನ್ನು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ತೋರಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಲಸಿಕೆ ನೀಡುತ್ತಾರೆ.
ವರ್ಗಾಯಿಸಬಹುದೇ? :
ಇಲ್ಲ, ಬಳಕೆದಾರರು ವರ್ಗಾ ಯಿಸಲು ಸಾಧ್ಯವಿಲ್ಲ. ನೀವು ಯಾರ ಹೆಸರಿಗೆ ಇ-ವೋಚರ್ ಖರೀದಿಸಿರುತ್ತೀರೋ ಅವರೇ ಲಸಿಕೆ ಪಡೆಯಬೇಕು. ಅವರು ಬೇರೊಬ್ಬರಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ