ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ
Team Udayavani, Oct 27, 2021, 10:30 PM IST
ನವದೆಹಲಿ: ಮಾದರಿ ನೀತಿ ಸಂಹಿತೆ ಪಾಲಿಸಲು ವಿಫಲವಾಗಿರುವ ಅಸ್ಸಾಂ ಸಿಎಂ ಹಿಮಾಂತ ಶರ್ಮ ಬಿಸ್ವ ಅವರಿಗೆ ಬುಧವಾರ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಅಸ್ಸಾಂನ 3 ಕ್ಷೇತ್ರಗಳಿಗೆ ಅ.30ರಂದು ಉಪ ಚುನಾವಣೆ ನಡೆಯಲಿದೆ. ಇದರ ಹೊರತಾಗಿಯೂ, ಸಿಎಂ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದರು ಎಂದು 2 ದೂರು ಆಯೋಗಕ್ಕೆ ಸಲ್ಲಿಕೆಯಾಗಿತ್ತು. ಅದನ್ನು ಪರಿಶೀಲಿಸಿದ ಆಯೋಗ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಆಯೋಗವೂ ಇನ್ನೂ ಕಠಿಣ ಶಿಕ್ಷೆಯನ್ನು ಸಿಎಂಗೆ ನೀಡಬೇಕಿತ್ತು. ಹಿಮಾಂತ ಶರ್ಮಾ ಬಿಸ್ವಾ ಅವರು ಅಸ್ಸಾಂ ಜನರಲ್ಲಿ ತಮ್ಮ ತಪ್ಪಿನ ಬಗ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ:ಆಟೋರಿಕ್ಷಾ ಚಾಲಕನೊಂದಿಗೆ ಪರಾರಿಯಾದ ಕೋಟ್ಯಧಿಪತಿಯ ಪತ್ನಿ!