2020ರಲ್ಲಿ ಆರ್ಥಿಕ ಪ್ರಗತಿ ಶೇ.7ಕ್ಕೆ ಮರಳಲಿದೆ: ಗೀತಾ
Team Udayavani, Oct 21, 2019, 6:15 AM IST
ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯು ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರವನ್ನು ಶೇ.6.1ಕ್ಕಿಳಿಸಿದ್ದರೂ, 2020ರ ವೇಳೆಗೆ ಆರ್ಥಿಕ ಪ್ರಗತಿಯು ಶೇ.7ಕ್ಕೇರುವ ನಿರೀಕ್ಷೆ ಇಟ್ಟುಕೊಂಡಿದೆ ಎಂಬ ವಿಚಾರವನ್ನು ಐಎಂಎಫ್ ನ ಪ್ರಮುಖ ಆರ್ಥಿಕ ತಜ್ಞೆ, ಮೈಸೂರು ಮೂಲದ ಗೀತಾ ಗೋಪಿನಾಥ್ ಹೇಳಿದ್ದಾರೆ.
ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, “2019ರಲ್ಲಿ ಭಾರತವು ವಿವಿಧ ವಲಯಗಳಲ್ಲಿ ಆಘಾತ ಎದುರಿಸಿದೆ. ಆದರೆ, ನಮ್ಮ ಪ್ರಕಾರ ಇದೊಂದು ಆವರ್ತಕ ಇಳಿಮುಖ. ಗ್ರಾಮೀಣ ಆದಾಯದ ಪ್ರಗತಿ ತೀರಾ ಕುಂಠಿತವಾಗಿದೆ. ಅಲ್ಲದೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು,ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳು ಬಿಕ್ಕಟ್ಟಿಗೆ ಸಿಲುಕಿವೆ. ಈ ಎಲ್ಲ ಅಂಶಗಳು ದೇಶೀಯ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಆದರೆ, ಕಳೆದ ತಿಂಗಳು ಸರ್ಕಾರವು ಘೋಷಿಸಿರುವ ಕಾರ್ಪೊರೇಟ್ ತೆರಿಗೆ ಕಡಿತವು ಸರಿಯಾದ ನಿಟ್ಟಿನಲ್ಲಿ ಇಟ್ಟಹೆಜ್ಜೆ. ಇದು ಮತ್ತು ಸರ್ಕಾರ ಕೈಗೊಂಡಿರುವ ಇನ್ನು ಕೆಲವು ನಿರ್ಧಾರಗಳು ಗ್ರಾಮೀಣ ಆದಾಯ ಹೆಚ್ಚಿಸುವಲ್ಲಿ ನೆರವಾಗಲಿವೆ. ಹೀಗಾಗಿ, 2020ರಲ್ಲಿ ಆರ್ಥಿಕ ಪ್ರಗತಿ ಶೇ.7 ಕ್ಕೇರುವ ಸಾಧ್ಯತೆ ಇದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ