ಆರ್ಥಿಕತೆಗೆ ಏನಾಗಿದೆ? ರೈಲು, ವಿಮಾನಗಳು ಜನನಿಭಿಡವಾಗಿದೆ, ವಿವಾಹವೂ ನಡೆಯುತ್ತಿದೆ…

Team Udayavani, Nov 15, 2019, 7:09 PM IST

ನವದೆಹಲಿ:ದೇಶದ ಆರ್ಥಿಕ ಅಭಿವೃದ್ಧಿ ಕುರಿತು ವಿರೋಧಪಕ್ಷಗಳ ಟೀಕೆಯನ್ನು ತಳ್ಳಿಹಾಕಿರುವ ಕೇಂದ್ರ ಸಚಿವ ಸುರೇಶ್ ಅಂಗಡಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನರು ತುಂಬಿರುತ್ತಾರೆ. ಜನರು ಮದುವೆಯಾಗುತ್ತಿದ್ದಾರೆ…ಅಂದರೆ ದೇಶದ ಆರ್ಥಿಕತೆ ಚೆನ್ನಾಗಿದೆ ಎಂದು ಅರ್ಥ ಎಂಬುದಾಗಿ ಉದಾಹರಣೆ ಮೂಲಕ ತಿರುಗೇಟು ನೀಡಿದ್ದಾರೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಆರ್ಥಿಕ ಸ್ಥಿತಿ ಇಳಿಕೆ ಕಾಣುತ್ತದೆ, ಆದರೆ ಇದು ಕೂಡಲೇ ಅಭಿವೃದ್ಧಿಯಾಗುತ್ತದೆ. ಆದರೆ ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಂಗಡಿ ಆರೋಪಿಸಿದರು.

ಶುಕ್ರವಾರ ಕೋಲ್ಕತಾ-ದೆಹಲಿ ನಡುವಿನ ಪಶ್ಚಿಮ ಸರಕು ಸಾಗಣೆ ಕಾರಿಡಾರ್ ಅನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಮಾನ ನಿಲ್ದಾಣ ಜನರಿಂದ ತುಂಬಿವೆ, ರೈಲುಗಳು ಜನರಿಂದ ತುಂಬಿರುತ್ತದೆ. ಜನರು ಕೂಡಾ ಮದುವೆಯಾಗುತ್ತಿದ್ದಾರೆ. ಹೀಗಾಗಿ ಆರ್ಥಿಕ ಬೆಳವಣಿಗೆ ಕುಸಿತ ಕಂಡಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ