ಆರ್ಥಿಕ ಕುಸಿತದಿಂದ ಪುಟಿದೇಳುವ ಶಕ್ತಿ ಇದೆ

Team Udayavani, Dec 20, 2019, 11:58 PM IST

ಹೊಸದಿಲ್ಲಿ: ಪ್ರಸ್ತುತ ಆರ್ಥಿಕ ಕುಸಿತದಿಂದ ಹೊರಬಂದು ಮತ್ತೆ ಪುಟಿದೇಳುವ ಸಾಮರ್ಥ್ಯ ಭಾರತಕ್ಕೆ ಇದೆ. 2024ರ ಹೊತ್ತಿಗೆ ನಾವು 5 ಲಕ್ಷಕೋಟಿ ಡಾಲರ್‌ ಆರ್ಥಿಕತೆಯ ಗುರಿ ಸಾಧಿಸುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ ನಡೆದ ಅಸ್ಸೋ ಚಾಮ್‌ ಕಾರ್ಯಕ್ರಮದಲ್ಲಿ ವಿಶ್ವದ ಕಾರ್ಪೊರೆಟ್‌ ಉದ್ದಿಮೆಗಳ ನಾಯಕರು, ರಾಯಭಾರಿಗಳು ಮತ್ತಿತರ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಕಂಪನಿ ಕಾಯ್ದೆಯಡಿ ಅನುಪಯುಕ್ತ ಕಾನೂನುಗಳನ್ನು ರದ್ದು ಪಡಿಸಲಾಗುವುದು. ಹಲವು ಸುಧಾರಣಾ ಕ್ರಮ ಕೈಗೊಂಡಿದ್ದೇವೆ. ಜಿಡಿಪಿ ಪ್ರಗತಿ ಹೆಚ್ಚಿಸಲು ಕಾರ್ಪೊರೇಟ್‌ ಕಂಪನಿಗಳು ದಿಟ್ಟ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು ಎಂದರು.

ಕೇಂದ್ರವು ಮುಂದಿನ ವರ್ಷಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ಹಾಗೂ ಗ್ರಾಮೀಣ ವಲಯ ಆರ್ಥಿಕತೆಗೆ 25 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಇದು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ತಲುಪಲು ನೆರವಾಗಲಿದೆ ಎಂದಿದ್ದಾರೆ. ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಕಳೆದ 3 ಅವಧಿಯಲ್ಲಿ ಭಾರತ 142ರಿಂದ 63 ನೇ ಸ್ಥಾನಕ್ಕೆ ಜಿಗಿದಿದೆ. ಬ್ಯಾಂಕಿಂಗ್‌, ಕಾರ್ಮಿಕ ಸೇರಿ ಹಲವಾರು ವಲಯಗಳಲ್ಲಿ ಸುಧಾರಣೆ, ಸುಲಭ ವಹಿವಾಟಿಗೆ ಅವಕಾಶ ಕಲ್ಪಿಸಿದ್ದೇವೆ. ಈಗ ಕೆಲವೇ ಗಂಟೆಗಳಲ್ಲಿ ಕಂಪನಿ ಸ್ಥಾಪಿಸಬಹುದಾಗಿದೆ ಎಂದಿದ್ದಾರೆ. ಕ್ರಮಬದ್ಧ ಹಾಗೂ ಆಧುನೀ ಕರಣ ಎಂಬ ಎರಡು ಬಲಿಷ್ಠ ಕಂಬಗಳ ಮೇಲೆ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ