ದುಬೈನಿಂದ ಗಡೀಪಾರು; ರಾಜೀವ್ ಸಕ್ಸೇನಾ, ದೀಪಕ್ ತಲವಾರ್: ED arrest
Team Udayavani, Jan 31, 2019, 6:36 AM IST
ಹೊಸದಿಲ್ಲಿ : 3,600 ಕೋಟಿ ರೂ. ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಓರ್ವ ಆರೋಪಿಯಾಗಿರುವ ದುಬೈ ಉದ್ಯಮಿ ರಾಜೀವ್ ಶಂಶೇರ್ ಬಹಾದ್ದೂರ್ ಸಕ್ಸೇನಾ ಮತ್ತು ಲಾಬ್ಬಿಯಿಸ್ಟ್ ದೀಪಕ್ ತಲ್ವಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಇವರಿಬ್ಬರನ್ನೂ ದುಬೈ ಅಧಿಕಾರಿಗಳು ನಿನ್ನೆ ಬುಧವಾರ ಭಾರತದ ಕೋರಿಕೆ ಪ್ರಕಾರ ಬಂಧಿಸಿ ಗಡೀಪಾರು ಮಾಡಿದ್ದರು.
ವಿದೇಶ ಹಣ ರವಾನೆ ಜಾಲದಲ್ಲಿ ಇವರು 90 ಕೋಟಿ ರೂ. ಅಕ್ರಮ ನಡೆಸಿರುವುದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇವರು ಬೇಕಾಗಿದ್ದರು.