ಐಎಂಎ ವಂಚಕ ಮನ್ಸೂರ್‌ಗೆ ಸೇರಿದ 209 ಕೋಟಿ ರೂ ಆಸ್ತಿ ಮುಟ್ಟುಗೋಲು
Team Udayavani, Jun 28, 2019, 4:58 PM IST
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರೂವಾರಿ, ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್‌ಗೆ ಸೇರಿದ 209 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನಲ್ಲಿ 20 ಕಟ್ಟಡಗಳು ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದ್ದು, ಒಟ್ಟು 209 ಕೋಟಿ ರೂ ಮೌಲ್ಯದ್ದಾಗಿದೆ ಎಂದು ಇಡಿ ಟ್ವೀಟ್‌ನಲ್ಲಿ ತಿಳಿಸಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಸಲಾಗುತ್ತಿದ್ದು, ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ED attaches under PMLA, 20 immovable properties and balances in Bank A/cs totaling to ₹209 Crore of IMA Group, Bengaluru and its Managing Director Mohammed Mansoor Khan, in a Ponzi Scheme case. pic.twitter.com/h8XKoSjSLN
— ED (@dir_ed) June 28, 2019