ನನ್ನನ್ನೂ ತಿರುವಳ್ಳುವರ್ ರೀತಿ ಕೇಸರಿ ಮಾಡಲು ಆಗಲ್ಲ! ನಟ ರಜನಿಕಾಂತ್ ಹೇಳಿದ್ದೇನು?

Team Udayavani, Nov 8, 2019, 1:20 PM IST

ಚೆನ್ನೈ: 2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹ ಕಳೆದ ಕೆಲವು ತಿಂಗಳಿನಿಂದ ಹರಿದಾಡುತ್ತಿತ್ತು. ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ತಿರುವಳ್ಳುವರ್ ಅವರನ್ನು ಕೇಸರಿ ಮಾಡಿದಂತೆ ನನ್ನನ್ನೂ ಕೂಡಾ ಕೇಸರಿ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡುವ ಮೂಲಕ ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ರಜನಿಕಾಂತ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಇಂದು ಸುದ್ದಿಗಾರರು ರಜನಿಕಾಂತ್ ಅವರಿಗೆ ಬಿಜೆಪಿ ಸೇರುವ ಯೋಚನೆ ಇದೆಯೇ ಎಂಬುದಾಗಿ ಪ್ರಶ್ನಿಸಿದ್ದರು.

ನನಗೆ ಅವರೇನೂ ಆಫರ್ ಕೊಟ್ಟಿಲ್ಲ. ಒಂದು ರಾಜಕೀಯ ಪಕ್ಷವಾಗಿದ್ದರಿಂದ ಜನರು ಆ ರೀತಿ (ಬಿಜೆಪಿ ಸೇರ್ಪಡೆ ಬಗ್ಗೆ) ಮಾತನಾಡುತ್ತಾರೆ. ಆದರೆ ಬಿಜೆಪಿ ಸೇರುವ ಯಾವುದೇ ಉದ್ದೇಶ ಖಂಡಿತಾ ಇಲ್ಲ ಎಂದು ಹೇಳಿದ್ದರು.

ತಿರುವಳ್ಳುವರ್ ಅವರನ್ನು ಕೇಸರಿ ಮಾಡಿದಂತೆ ನನ್ನನ್ನೂ ಮಾಡಲು ಸಾಧ್ಯವಿಲ್ಲ. ತಿರುವಳ್ಳುವರ್ ಕೂಡಾ ಕೇಸರಿ ಆಗಲ್ಲ, ನಾನೂ ಕೂಡಾ ಕೇಸರಿ ಪಕ್ಷದೊಳಕ್ಕೆ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ತಿರುವಳ್ಳುವರ್ ಕೇಸರಿ ವಿವಾದ?

ನವೆಂಬರ್ 1ರಂದು ತಮಿಳುನಾಡು ಬಿಜೆಪಿ ಘಟಕ ತಮಿಳು ಸಂತ ಕವಿ ತಿರುವಳ್ಳುವರ್ ಕೇಸರಿ ಶಾಲು ಧರಿಸಿರುವ ಮತ್ತು ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದ ಫೋಟೊವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿತ್ತು. ತಿರುವಳ್ಳುವರ್ ಅವರನ್ನು ಕೇಸರಿ ಶಾಲು ಧರಿಸಿದಂತೆ ಚಿತ್ರ ಪೋಸ್ಟ್ ಮಾಡಿರುವುದಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬಾಲಸೋರ್‌: ಒಡಿಶಾ ಕರಾವಳಿ ತೀರದಲ್ಲಿರುವ ಬಾಲಸೋರ್‌ನಲ್ಲಿ ನಡೆಸಲಾದ ಅಗ್ನಿ-2 ಖಂಡಾಂತರ ಕ್ಷಿಪಣಿಯ ರಾತ್ರಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಎಂದು ರಕ್ಷಣಾ ಇಲಾಖೆಯ...

  • ಹೊಸದಿಲ್ಲಿ: "ಅಯೋಧ್ಯೆಯ ಶ್ರೀರಾಮ, ಕೇವಲ ಹಿಂದೂ  ಗಳಿಂದ ಪೂಜಿಸಲ್ಪಡು ವುದಿಲ್ಲ. ಮುಸ್ಲಿಮ ರಿಂದಲೂ ಆರಾಧಿಸಲ್ಪಡುತ್ತಾನೆ. ಏಕೆಂದರೆ, ಭಾರತದಲ್ಲಿ ರುವ ಶೇ.99ರಷ್ಟು...

  • ಅಯೋಧ್ಯೆ: ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸಗೊಂಡ ವರ್ಷಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದೆ. ರೆಡ್‌...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...