ಸಿಯಾಚಿನ್ ಹಿಮಪಾತಕ್ಕೆ 4 ಯೋಧರು ಮತ್ತು ಇಬ್ಬರು ನಾಗರಿಕರು ಸಾವು


Team Udayavani, Nov 18, 2019, 10:25 PM IST

Siachin-Glacier-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ವಿಶ್ವದ ಅತೀ ಎತ್ತರದ ಸೇನಾನೆಲೆ ಸಿಯಾಚಿನ್ ನಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರ ಪರಿಣಾಮ ಈ ಭಾಗದಲ್ಲಿದ್ದ ಭಾರತೀಯ ಸೇನಾನೆಲೆ ಅಪಾಯಕ್ಕೊಳಗಾಗಿದೆ ಮತ್ತು ಸುಮಾರು ಎಂಟು ಜನ ಭಾರತೀಯ ಯೋಧರು ಈ ಹಿಮಪಾತದಲ್ಲಿ ಸಿಲುಕಿದ್ದಾರೆ ಹಾಗೂ ಇವರಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ 3.30ರ ಸುಮಾರಿಗೆ ಈ ಘಟನೆ ನಡೆದಿರುವ ಕುರಿತು ಮಾಹಿತಿ ಲಭಿಸಿದೆ.

ಸಮುದ್ರ ಮಟ್ಟದಿಂದ ಸುಮಾರು 18,000 ಅಡಿ ಎತ್ತರದಲ್ಲಿರುವ ಉತ್ತರ ಗ್ಲೇಸಿಯರ್ ಭಾಗದಲ್ಲಿ ಭಾರೀ ಪ್ರಮಾಣದ ಹಿಮಪಾತ ಸಂಭವಿಸಿರುವುದಾಗಿ ಸೇನಾ ಮೂಲಗಳಿಂದ ತಿಳಿದುಬಂದಿದೆ. ಭಾರೀ ಹಿಮದಲ್ಲಿ ಸಿಲುಕಿಕೊಂಡಿರುವ ಯೋಧರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಭಾರತೀಯ ಸೇನೆಯ ಎಂಟು ಜನ ಯೋಧರು ತಮ್ಮ ದೈನಂದಿನ ಗಸ್ತು ತಿರುಗಾಟದಲ್ಲಿದ್ದ ಸಂದರ್ಭದಲ್ಲಿ ಹಿಮಪಾತ ಉಂಟಾದ ಕಾರಣ ಹಿಮದ ಅಡಿಯಲ್ಲಿ ಸಿಲುಕಿಕೊಂಡರು ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.

2016ರ ಫೆಬ್ರವರಿ ತಿಂಗಳಿನಲ್ಲಿ ಇದೇ ಸಿಯಾಚಿನ್ ಗ್ಲೇಸಿಯರ್ ಭಾಗದಲ್ಲಿ ದೊಡ್ಡ ಹಿಮ ಬಂಡೆಯೊಂದು ಉರುಳಿದ ಪರಿಣಾಮ ಸುಮಾರು 10 ಜನ ಭಾರತೀಯ ಯೋಧರು 35 ಅಡಿ ಹಿಮದಲ್ಲಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗಾಗಿ 150 ಮಂದಿಯ ವಿಶೇಷ ತಂಡವೊಂದು ಸತತ ಕಾರ್ಯಾಚರಣೆಗೆ ಇಳಿದಿತ್ತು.

ಈ ಸಂದರ್ಭದಲ್ಲಿ ಕರ್ನಾಟಕದವರಾಗಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ದಪ್ಪ ಹಿಮಗಡ್ಡೆಯ ಅಡಿಯಲ್ಲಿ ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ರಕ್ಷಣಾ ತಂಡ ಹಿಮದಡಿಯಿಂದ ಮೆಲೆತ್ತಿ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಮೂರು ದಿನಗಳ ಬಳಿಕ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮತ್ತು ಆ ಹಿಮಪಾತದಲ್ಲಿ ಜೀವಂತ ಸಿಕ್ಕಿದ್ದ ಏಕೈಕ ಯೋಧ ಅವರಾಗಿದ್ದರು.

ಟಾಪ್ ನ್ಯೂಸ್

18

ಹಿಮಾಚಲ ಪ್ರದೇಶದಲ್ಲಿ ಮೋದಿ ರೋಡ್‌ ಶೋ ಫ್ಲಾಪ್‌ ಯಾಕೆ?: ಕಾಂಗ್ರೆಸ್‌

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

tdy-10

ದತ್ತ ಜಯಂತಿಗೆ ಶಾಂತಿಯುತ ತೆರೆ

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

1-asdsadsad

ಖರ್ಗೆ ಅವರಿಗೆ ರಾವಣ ಯಾರು ಎಂದು ಗೊತ್ತಾಗಿದೆ ಎಂದು ಭಾವಿಸುತ್ತೇನೆ: ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

1-dasdadad

ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್; ಆಪ್ ಖಾತೆ ತೆರೆಯಲು ವಿಫಲ

15

ಪಣಜಿ: ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಯಾವುದೇ ಯೋಜನೆ ಇಲ್ಲ

1-ads-aSAsa

ಗುಜರಾತಿನ ಜನರಿಂದ ದಾಖಲೆಗಳನ್ನು ಮುರಿಯುವುದರಲ್ಲಿಯೂ ದಾಖಲೆ : ಪ್ರಧಾನಿ ಮೋದಿ

1-dwweeq

ಏಕೈಕ ಕ್ರಿಶ್ಚಿಯನ್ ಅಭ್ಯರ್ಥಿ ಕಣಕ್ಕಿಳಿಸಿ ನಾಲ್ಕು ಬಾರಿಯ ಕಾಂಗ್ರೆಸ್ ಶಾಸಕನಿಗೆ ಶಾಕ್ ನೀಡಿದ ಬಿಜೆಪಿ

MUST WATCH

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

ಹೊಸ ಸೇರ್ಪಡೆ

18

ಹಿಮಾಚಲ ಪ್ರದೇಶದಲ್ಲಿ ಮೋದಿ ರೋಡ್‌ ಶೋ ಫ್ಲಾಪ್‌ ಯಾಕೆ?: ಕಾಂಗ್ರೆಸ್‌

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

1-asdsadas

ಬಂಗಾರ ಪಲ್ಕೆ ಟ್ರಾಕ್ಟರ್ ಪಲ್ಟಿಯಾಗಿ ಮೃತಪಟ್ಟ ಅಪರಿಚಿತ ಕಾರ್ಮಿಕನ ಗುರುತು ಪತ್ತೆಗೆ ಮನವಿ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.