ಚುನಾವಣಾ ಆಯುಕ್ತ ಅಶೋಕ್‌ ಲಾವಾಸ ಪುತ್ರನಿಗೆ ತೊಂದರೆ?

Team Udayavani, Nov 13, 2019, 12:37 AM IST

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ತನಿಖಾ ವ್ಯಾಪ್ತಿಯಲ್ಲಿರುವ ಮತ್ತು ವಿದೇಶಿ ವಿನಿಮಯ ಕಾಯ್ದೆ (ಫೆಮಾ) ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿರುವ ಸಂಸ್ಥೆ ಜತೆಗೆ ಚುನಾವಣಾ ಆಯುಕ್ತ ಅಶೋಕ್‌ ಲಾವಾಸರ ಪುತ್ರ ಅಬಿರ್‌ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಜತೆಗೆ ಅಬಿರ್‌ರ ಸಂಸ್ಥೆಯೂ ಆರೋಪಕ್ಕೆ ಗುರಿಯಾಗಿರುವ ಕಂಪೆನಿ ಜತೆಗೆ ಲಿಂಕ್‌ ಹೊಂದಿದೆ. ನೌರಿಶ್‌ ಆರ್ಗಾನಿಕ್‌ ಫ‌ುಡ್ಸ್‌ ಪ್ರೈ.ಲಿ ಎಂಬ ಸಂಸ್ಥೆ 7.25 ಕೋಟಿ ರೂ. ಸಂಗ್ರಹಿಸಿದ್ದಕ್ಕಾಗಿ ಫೆಮಾದಡಿಯಲ್ಲಿ ಕೇಸು ದಾಖಲಿಸಲಾಗಿದೆ. ಸಾಮಾ ಕ್ಯಾಪಿಟಲ್‌ ಎಂಬ ಮಾರಿಷಸ್‌ ಮೂಲದ ಸಂಸ್ಥೆ ಮೂಲಕ ಮೊತ್ತ ಸಂಗ್ರಹಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬಿರ್‌ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ