ಇಪಿಎಫ್ಒ: ಏಕಕಾಲದಲ್ಲಿ ಪಿಂಚಣಿ ಜಮೆ?
Team Udayavani, Jul 10, 2022, 7:25 AM IST
ಹೊಸದಿಲ್ಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯು ದೇಶಾದ್ಯಂತ ನಿವೃತ್ತ ಉದ್ಯೋಗಿಗಳ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ ಪಿಂಚಣಿ ಜಮಾ ಮಾಡುವ ಕೇಂದ್ರೀಕೃತ ವ್ಯವಸ್ಥೆಯನ್ನು ಆರಂಭಿಸುವ ಬಗ್ಗೆ ಶೀಘ್ರವೇ ನಿರ್ಣಯ ತಳೆಯಲಿದೆ.
ಜು. 29 ಮತ್ತು 30ರಂದು ಇಪಿಎಫ್ಒ ವಿಶ್ವಸ್ಥರ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಸದ್ಯ ದೇಶದ ವಿವಿಧೆಡೆ ಇರುವ 138 ಪ್ರಾಂತೀಯ ಕಚೇರಿಗಳ ಮೂಲಕ ಆಯಾ ಪ್ರಾಂತ್ಯದ ನಿವೃತ್ತರಿಗೆ ಪಿಂಚಣಿ ಜಮಾ ಮಾಡಲಾಗುತ್ತಿದೆ. ಇದರಿಂದ ಬೇರೆ ಬೇರೆ ಸಮಯ ಅಥವಾ ದಿನ ಪಿಂಚಣಿ ಜಮೆಯಾಗುತ್ತಿತ್ತು. ಹೊಸ ವ್ಯವಸ್ಥೆ ಈ ಸಮಸ್ಯೆಯನ್ನು ನಿವಾರಿಸಲಿದ್ದು, ಸುಮಾರು 73 ಲಕ್ಷ ಮಂದಿ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ.
ಜು. 29, 30ರಂದು ನಡೆಯಲಿರುವ ಇಪಿಎಫ್ಒ ವಿಶ್ವಸ್ಥರ ಸಭೆಯಲ್ಲಿ ಕೇಂದ್ರೀ ಕೃತ ಪಿಂಚಣಿ ಜಮಾವಣೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಪ್ರಸ್ತಾವನೆ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದಕ್ಕಾಗಿ 138 ಪ್ರಾಂತೀಯ ಕಚೇರಿಗಳ ಡಾಟಾಬೇಸ್ನ್ನು ಬಳಕೆ ಮಾಡಿಕೊಳ್ಳ ಲಾಗುತ್ತದೆ ಎಂದು ಅವು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು