2 ಡಜನ್‌ ಕ್ರಿಮಿನಲ್‌ ಕೇಸ್‌ ಹೊಂದಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ

Team Udayavani, Jun 25, 2019, 12:38 PM IST

ಮುಜಾಫ‌ರ್‌ನಗರ್‌ (ಉತ್ತರ ಪ್ರದೇಶ) : 2 ಡಜನ್‌ಗಳಿಗೂ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಕ್ರಿಮಿನಲ್‌ ಆರೋಪಿಯೊಬ್ಬನನ್ನು ಎಸ್‌ಟಿಎಫ್ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಘಟನೆ ಬುಧವಾರ ಮೀರಾಪುರ್‌ನಲ್ಲಿ ನಡೆದಿದೆ.

ಹತ್ಯೆಗೀಡಾದ ಆರೋಪಿ ಆದೇಶ್‌ ಎನ್ನುವವನಾಗಿದ್ದು, ಈತನ ಮೇಲೆ  1 ಲಕ್ಷ ರೂಪಾಯಿ  ಇನಾಮನ್ನು ಪೊಲೀಸ್‌ ಇಲಾಖೆ ಘೋಷಿಸಿತ್ತು.

ಕುಖ್ಯಾತ ಕ್ರಿಮಿನಲ್‌ ಮುನ್ನಾ ಭಜರಂಗಿಯನ್ನು ಸಹಕೈದಿ ಗುಂಡಿಟ್ಟು ಹತ್ಯೆ ಮಾಡಿದ ವೇಳೆ ದೇಶ್‌  ಬಾಘಪತ್‌ ಜೈಲಿನಲ್ಲಿ ಕೈದಿಯಾಗಿದ್ದ ಎಂದು ಎಸ್‌ಟಿಎಫ್ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ