Udayavni Special

ಐವರು ಉಗ್ರರು ಫಿನಿಶ್‌


Team Udayavani, Aug 5, 2018, 12:40 PM IST

jammu.jpg

ಉಗ್ರನ ಅಂತ್ಯಸಂಸ್ಕಾರಕ್ಕೆ ಲಷ್ಕರ್‌ ಎ ತೊಯ್ಬಾ ಉಗ್ರ ಹಾಜರ್‌
ಶ್ರೀನಗರ: ಜಮ್ಮು  ಮತ್ತು ಕಾಶ್ಮೀರದ  ಶೋಪಿಯಾನ್‌ನಲ್ಲಿ ಶನಿವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಐವರು ಉಗ್ರ ರನ್ನು ಹೊಡೆದುರುಳಿಸಲಾಗಿದೆ. ಆದರೆ ಉಗ್ರರ ಪರ ನಿಂತ ಸ್ಥಳೀಯರು ಯೋಧರ ಮೇಲೆ ವಿಪರೀತ ಕಲ್ಲು ತೂರಾಟ ನಡೆಸಿ ದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಸೇನೆ ಗುಂಡಿನ ದಾಳಿ ನಡೆಸಿದ್ದು, ಇದರಿಂ ದಾಗಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಉಗ್ರರ ಹತ್ಯೆ: ಶುಕ್ರವಾರ ಸಂಜೆ ಶೋಪಿಯಾನ್‌ನ ಕಿಲೂರ ಗ್ರಾಮದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೇನೆ ಗ್ರಾಮವನ್ನು ಸುತ್ತುವರಿದಿತ್ತು. ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಓರ್ವ ಉಗ್ರನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ಆದರೆ ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿ, ಶನಿವಾರ ಬೆಳಗ್ಗೆ ಪುನಾರಂಭಿಸಲಾಗಿತ್ತು.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೂ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಉಮರ್‌ ನಾಜಿರ್‌ ಮಲಿಕ್‌, ವಕಾರ್‌ ಅಹಮದ್‌ ಶೇಖ್‌, ಏಜಾಜ್‌ ಅಹಮದ್‌ ಪೌಲ್‌, ಅರ್ಷದ್‌ ಅಹಮದ್‌ ಖಾನ್‌ ಮತ್ತು ಅರಿಫ್ ಅಹಮದ್‌ ಮೀರ್‌ ಎಂದು ಇವರನ್ನು ಗುರುತಿಸಲಾಗಿದೆ. ಎಲ್ಲ ಉಗ್ರರೂ ಸ್ಥಳೀಯರು ಎಂದು ಸೇನೆ ಹೇಳಿದೆ.ರಕ್ಷಣಾ ಖಾತೆ ಸಚಿವಾಲಯದ ವಕ್ತಾರ ಕ.ರಾಜೇಶ್‌ ಕಾಲಿಯ ಮಾತನಾಡಿ ಲಷ್ಕರ್‌ ಉಗ್ರ ಸಂಘಟನೆಯ ನವೀದ್‌ ಜಟ್‌  ಶೇಕ್‌ ಎಂಬ ಉಗ್ರನ ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷನಾಗಿದ್ದ. ಆತ ಪತ್ರಕರ್ತ ಶುಜಾತ್‌ ಬುಖಾರಿ ಹತ್ಯೆಯಲ್ಲಿ ಪ್ರಮುಖ ಸಂಚುಕೋರನಾಗಿದ್ದ ಎಂದಿದ್ದಾರೆ.

ಕಲ್ಲು ತೂರಾಟ:   ಶೋಪಿಯಾನ್‌ನಲ್ಲಿ ಅರ್ಷದ್‌ ಅಹಮದ್‌ ಖಾನ್‌ ಎಂಬ ಉಗ್ರನನ್ನು ಹೊಡೆದುರುಳಿಸುತ್ತಿದ್ದಂತೆಯೇ  ಸ್ಥಳೀಯರು ತಂಡೋಪತಂಡವಾಗಿ ಆಗಮಿಸಿ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್‌ ವಾಹನಗಳ ಮೇಲೆ ಪೆಟ್ರೋಲ್‌ ಬಾಂಬ್‌ ಕೂಡ ಎಸೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೆಲ್ಲೆಟ್‌ ಗನ್‌ ಬಳಸಿದ್ದಾರೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಗನೋಪೋರಾದಲ್ಲಿ ಓರ್ವ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯೋಧರು ನಡೆಸಿದ ಗುಂಡಿನ ದಾಳಿಯ ವೇಳೆ, ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಸಾವಿನ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ. ಗಾಯಗೊಂಡವ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಗ್ರ ಹಾಜರ್‌!: ಅಚ್ಚರಿಯ ಸಂಗತಿಯೆಂ ದರೆ ಲಷ್ಕರ್‌ ಎ ತೋಯ್ಬಾ ಉಗ್ರ ಹಾಗೂ ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನವೀದ್‌ ಜಟ್‌ ಉಗ್ರನೊಬ್ಬನ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದಾನೆ. ಜಟ್‌ ಫೆಬ್ರವರಿ 6 ರಂದು ಪೊಲೀಸ್‌ ಕಸ್ಟಡಿಯಿಂದ 
ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಪರಾರಿಯಾಗಿದ್ದ.

ದಾಳಿ ಭೀತಿ: ದಿಲ್ಲಿಯಲ್ಲಿ ಹೈ ಅಲರ್ಟ್‌ 
ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ, ಉಗ್ರರ ದಾಳಿ ಭೀತಿಯಿಂದಾಗಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ದಿಲ್ಲಿ ಎನ್‌ಸಿಆರ್‌ನಲ್ಲಿ ಬಾಂಗ್ಲಾದೇಶದ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯ ಚುರುಕುಗೊಂಡಿದ್ದು, ಕೆಂಪು ಕೋಟೆಯನ್ನು ಜನಸಾಮಾನ್ಯರ ವೀಕ್ಷಣೆಗೆ ಬಂದ್‌ ಮಾಡಲಾಗಿದೆ. ಕೆಂಪುಕೋಟೆಯ ಸುತ್ತಮುತ್ತಿರುವ 500ಕ್ಕೂ ಹೆಚ್ಚು ಸಿಸಿಟಿವಿಗಳ ನಿರಂತರ ಕಣ್ಗಾವಲು ಇಡಲಾಗುತ್ತಿದೆ. ಇನ್ನೊಂದೆಡೆ ದೇಶದ 15ಕ್ಕೂಹೆಚ್ಚು ಸೇನಾ ನೆಲೆಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಮಲ್ಟಿ ಏಜೆನ್ಸಿ ಕೋಆರ್ಡಿನೇಶನ್‌ ಸೆಂಟರ್‌ ವರದಿ ಮಾಡಿದೆ.  20ಕ್ಕೂ ಹೆಚ್ಚು ಉಗ್ರರನ್ನು ಈ ನೆಲೆಗಳ ಮೇಲೆ ದಾಳಿ ನಡೆಸಲು ನಿಯೋಜಿಸಲಾಗಿದೆ. ಇವರು ಗಡಿಯಾಚೆಗೆ ಕಾದು ಕೂತಿದ್ದಾರೆ ಎಂದು ಹೇಳಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾರಾಷ್ಟ್ರ: ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಉಗುಳಿದರೆ ಜೈಲುಶಿಕ್ಷೆ

ಮಹಾರಾಷ್ಟ್ರ: ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಉಗುಳಿದರೆ ಜೈಲುಶಿಕ್ಷೆ

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಮೋದಿ 2.0: ಕನಸು ಹಾಗೂ ಸವಾಲುಗಳ ಹಾದಿಯಲ್ಲಿ…

ಮೋದಿ 2.0: ಕನಸು ಹಾಗೂ ಸವಾಲುಗಳ ಹಾದಿಯಲ್ಲಿ…

ಜಾಗತಿಕ ಸ್ತರದಲ್ಲಿ ಚತುರ ಹೆಜ್ಜೆ ; ವಿದೇಶಾಂಗ ನೀತಿಗಳಲ್ಲಿ ವಿಜಯ ಪತಾಕೆ

ಮೋದಿ 2.0: ಜಾಗತಿಕ ಸ್ತರದಲ್ಲಿ ಚತುರ ಹೆಜ್ಜೆ ; ವಿದೇಶಾಂಗ ನೀತಿಗಳಲ್ಲಿ ವಿಜಯ ಪತಾಕೆ

ಮೋದಿ 2.0: ಹೊಸ ಕಾಯ್ದೆಯ ಹೊಳಪು

ಮೋದಿ 2.0: ಹೊಸ ಕಾಯ್ದೆಯ ಹೊಳಪು

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

Sleep-Fusion

ಇನ್‌ಲ್ಯಾಂಡ್‌ ಲೆಟರ್‌: ಪ್ರಯಾಣದಲ್ಲಿ ಕನಸಿನ ಸಂಭಾಷಣೆಯಲ್ಲಿ

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.