ಇವಿಎಂ ಪ್ರಶ್ನೆ ಬೋಗಸ್‌, 370ನೇ ವಿಧಿ ನಿಲುವು ಸ್ಪಷ್ಟ : ಬಿಹಾರ ಸಿಎಂ ನಿತೀಶ್‌

Team Udayavani, May 21, 2019, 3:54 PM IST

ಪಟ್ನಾ : ‘ಇವಿಎಂ ಸಾಚಾತನದ ಬಗ್ಗೆ ಜನರು ಬೋಗಸ್‌ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ; ನಿಜಕ್ಕಾದರೆ ಇವಿಎಂ ಗಳನ್ನು ಪರಿಚಯಿಸಲಾದ ಬಳಿಕವೇ ಚುನಾವಣೆಗಳು ಹೆಚ್ಚು ಪಾರದರ್ಶಶಕವಾಗಿವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

“ಈ ಹಿಂದೆಯೂ ಅನೇಕ ಬಾರಿ ಇವಿಎಂ ತಂತ್ರಜ್ಞಾನವನ್ನೇ ಪ್ರಶ್ನಿಸಲಾಗಿದೆ ಮತ್ತು ಚುನಾವಣಾ ಆಯೋಗ ಅದಕ್ಕೆ ತಕ್ಕುದಾದ ಉತ್ತರವನ್ನೇ ನೀಡಿದೆ; ಚುನಾವಣೆಯಲ್ಲಿ ಸೋಲಾಗುವ ಶಂಕೆ ಇರುವ ಬಣಗಳು ಇವಿಎಂ ಗಳಲ್ಲಿ ಲೋಪದೋಷ ಇದೆ ಎಂದು ಗುಲ್ಲೆಬ್ಬಿಸುತ್ತಿವೆ; ಇದೇನೂ ಹೊಸ ವಿಷಯವಲ್ಲ’ ಎಂದು ನಿತೀಶ್‌ ಹೇಳಿದರು.

‘ಎನ್‌ಡಿಎ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳ ಮೂಲಕ ಮತದಾರರು ಸಂವಿಧಾನದ 370ನೇ ವಿಧಿ, ಸಮಾನ ನಾಗರಿಕ ಸಂಹಿತೆ, ಇವಿಎಂ ಇತ್ಯಾದಿ ವಿಷಯಗಳಲ್ಲಿನ ತಮ್ಮ ನಿಲುವನ್ನು ದೃಢಪಡಿಸಿದ್ದಾರೆ’ ಎಂದು ನಿತೀಶ್‌ ಹೇಳಿದರು.

ನಿತೀಶ್‌ ಅವರು ಎನ್‌ಡಿಎ ಮಿತ್ರ ಪಕ್ಷಗಳಿಗಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಏರ್ಪಡಿಸಿರುವ ಭೋಜನ ಕೂಟದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ