ಮತಗಟ್ಟೆ ಸಮೀಕ್ಷೆಗೆ ವ್ಯತಿರಿಕ್ತ ಫ‌ಲಿತಾಂಶ ಬಂದರೆ ಇವಿಎಂ ಕಾರಣ: ಆಜಂ

Team Udayavani, Dec 11, 2018, 12:13 PM IST

ಹೊಸದಿಲ್ಲಿ : ಪಂಚರಾಜ್ಯ ಚುನಾವಣೆಗಳ ಫ‌ಲಿತಾಂಶಗಳು ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಾರದೇ ಹೋದಲ್ಲಿ ಅದಕ್ಕೆ ಇವಿಎಂ ಗಳೇ ಕಾರಣ ಎಂದು ದೂರಬೇಕಾಗುವುದು ಎಂದು ಹಿರಿಯ ರಾಜಕಾರಣಿ ಆಜಂ ಖಾನ್‌ ಹೇಳಿದ್ದಾರೆ.

ಕಾಂಗ್ರೆಸ್‌ ಸಹಿತ ಅನೇಕ ರಾಜಕೀಯ ಪಕ್ಷಗಳು ಈ ಹಿಂದೆ ತಾವು ಸೋತಾಗಲೆಲ್ಲ ಇಲೆಕ್ಟ್ರಾನಿಕ್‌ ವೋಟಿಂಗ್‌ ಮಶೀನ್‌ಗಳ ತಿರುಚಿವಿಕೆಯೇ ಅದಕ್ಕೆ ಕಾರಣವೆಂದು ದೂರಿದ್ದವಲ್ಲದೆ ಮತಪತ್ರ ಬಳಕೆಯನ್ನು ಮತ್ತೆ ಜಾರಿಗೆ ತರಬೇಕೆಂದು ಹಲವು ಸ್ತರಗಳಲ್ಲಿ ಒತ್ತಾಯಿಸಿದ್ದವು.

ಈಗ ಮತ್ತೆ ಪುನಃ ಇವಿಎಂ ಗಳನ್ನು ವಿವಾದಕ್ಕೆ ಎಳೆದು ತರುವ ಯತ್ನ ನಡೆದಿದ್ದು ಆಜಂ ಖಾನ್‌ ಅವರು ಮತಗಟ್ಟೆ ಸಮೀಕ್ಷೆಗಿಂತ ವ್ಯತಿರಿಕ್ತ ಫ‌ಲಿತಾಂಶ ಬಂದರೆ ಅದಕ್ಕೆ ಇವಿಎಂ ಗಳೇ ಕಾರಣವೆಂದು ಹೇಳಬೇಕಾಗುವುದು ಎಂದು ವಿವಾದ ಸೃಷ್ಟಿಸಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ