ಮತದಾನೋತ್ತರ ಸಮೀಕ್ಷೆಗಳಲ್ಲಿ ‘ಮತ್ತೆ ಮೋದಿ ಸರ್ಕಾರ್’

ಎನ್.ಡಿ.ಎ.ಗೆ ನಿಚ್ಚಳ ಬಹುಮತ ; ಮಹಾಘಟಬಂಧನ್ ಗೆ ಇಲ್ಲ ಪಟ್ಟ ; ಕಾಂಗ್ರೆಸ್ ಸ್ಥಿತಿ ತುಸು ಚೇತರಿಕೆ

Team Udayavani, May 19, 2019, 7:10 PM IST

ನವದೆಹಲಿ: ದೇಶದೆಲ್ಲೆಡೆ ಏಳನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಿದೆ. ಇದರ ಬೆನ್ನಲ್ಲೇ ವಿವಿಧ ಖಾಸಗಿ ಸುದ್ದಿವಾಹಿನಿಗಳು ಮತ್ತು ಖಾಸಗಿ ಸಮೀಕ್ಷಾ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷಾ ವರದಿಗಳು ಬಹಿರಂಗವಾಗಿದೆ.

ಸರಿಸುಮಾರು ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎ.) 300ಕ್ಕೂ ಹೆಚ್ಚು ಸ್ತಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಅಧಿಕಾರಕ್ಕೆ ಬರುವ ಮುನ್ಸೂಚನೆಯನ್ನು ನೀಡಿದೆ.

ವಿವಿಧ ಸಮೀಕ್ಷಾ ಏಜೆನ್ಸಿಗಳು ನಡೆಸಿರುವ ಮತದಾನೋತ್ತರ ಚುನಾವಣಾ ಸಮೀಕ್ಷೆಯ ವಿವರಗಳು ಹೀಗಿವೆ:

ಟುಡೇಸ್ ಚಾಣಕ್ಯ: NDA – 340 ; UPA – 70 ಮತ್ತು ಇತರರು – 133

ನ್ಯೂಸ್ ನೇಷನ್ ಸಮೀಕ್ಷೆ : NDA – 282 -290 ; UPA – 118-126 ಮತ್ತು ಇತರರು – 130-138

ನ್ಯೂಸ್ ಎಕ್ಸ್ ನೇತಾ ಸಮೀಕ್ಷೆ : NDA – 242 ; UPA – 165  ಮತ್ತು ಇತರರು – 136

ರಿಪಬ್ಲಿಕ್ ಮತ್ತು ಜನ್ ಕಿ ಬಾತ್ ಸಮೀಕ್ಷೆ: NDA -305 ;  UPA – 124 ; ಮತ್ತು ಇತರರು – 113

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ: NDA – 306 ; UPA – 132 ಮತ್ತು ಇತರರು – 104

ಸಿ-ವೋಟರ್ ಸಮೀಕ್ಷೆ : NDA – 287 ; UPA – 128 ; ಮತ್ತು ಇತರರು – 127

ಪೋಲ್ ಆಫ್ ಪೋಲ್ಸ್ : NDA – 296 ; UPA – 126 ; ಮತ್ತು ಇತರರು – 120

ಇಂಡಿಯಾ ಟುಡೇ : NDA – 261 ; UPA – 110 ; ಮತ್ತು ಇತರರು – 150


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ