ಎಂಎನ್ ಸಿ ಸಂಸ್ಥೆಗಳಿಂದ ಹೆಚ್ಚು ತೆರಿಗೆ ನಿರೀಕ್ಷೆ
Team Udayavani, Oct 10, 2019, 6:02 PM IST
ಹೊಸದಿಲ್ಲಿ: ಭಾರತ ಇದೀಗ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ಹೆಚ್ಚು ತೆರಿಗೆ ನಿರೀಕ್ಷೆ ಹೊಂದುವ ವಿಶ್ವಾಸದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಗೂಗಲ್, ಆ್ಯಪಲ್ ಮತ್ತು ಫೇಸ್ಬುಕ್ ಸಂಸ್ಥೆಯ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಸಾಧ್ಯತೆ ಇದೆ. ಈ ಮೂರು ಪ್ರಸಿದ್ಧ ಸಂಸ್ಥೆಗಳು ಈಗ 10 ವರ್ಷ ಹಿಂದಿನ ಹಳೆ ನಿಯಮಗಳ ಮೇಲೆ ತೆರಿಗೆ ಪಾವತಿಸುತ್ತಿವೆ. ಇದೀಗ ಓಇಸಿಡಿ ತೆರಿಗೆಯನ್ನು ಪರಿಷ್ಕೃತಗೊಳಿಸುವ ಪ್ರಸ್ತಾವನೆಗೆ ಮುಂದಾಗಿದೆ.
ಇದರ ಪೂರ್ವಭಾವಿಯಾಗಿ ಫೇಸ್ಬುಕ್, ಗೂಗಲ್, ಟ್ವೀಟರ್, ಲಿಂಕ್ಡ್ಇನ್ ಮತ್ತು ಏರ್ಬ್ನ ಸಂಸ್ಥೆಗಳನ್ನು ಈಗಾಗಲೇ ಸಂರ್ಕಿಸಲಾಗಿದೆ. ಈ ನೂತನ ತೆರಿಗೆ ಕ್ರಮ ಜಾರಿಯಾದರೆ ಭಾರತದಲ್ಲಿ ಈ ಬಹುರಾಷ್ಟ್ರೀಯ ಸಂಸ್ಥೆಗಳು ಹೊಂದುತ್ತಿದ್ದ ಆದಾಯ¨ದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾರತದಲ್ಲಿ ಇಂತಹ ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚು ಕರ್ತವ್ಯ ನಿರ್ವಹಿಸುತ್ತಿದ್ದು, ಆಧಾಯದನ್ವಯ ಪಾವತಿಸಬೇಕಾದ ತೆರಿಗೆಯನ್ನು ಇನ್ನೂ ಪಾವತಿಸುತ್ತಿಲ್ಲ.
ಈಗಾಗಲೇ ಫ್ರಾನ್ಸ್ ಮತ್ತು ಐರೆಲಂಡ್ನಲ್ಲಿ ಇಂತಹ ತಾಣಗಳ ಮೇಲೆ ತೆರಿಗೆಯನ್ನು ಮರು ನಿಗದಿಪಡಿಸಲಾಗುತ್ತಿದೆ. ಐರೆಲಂಡಿನಲ್ಲಿ ಆ್ಯಪಲ್ ಸಂಸ್ಥೆ 14 ಬಿಲಿಯನ್ ಡಾಲರ್, ಗೂಗಲ್ 1 ಬಿಲಿಯನ್ ಡಾಲರ್ ಪಾವತಿಸುವ ನಿರ್ಧಾರಕ್ಕೆ ಬಂದಿದೆ. ಭಾರತದಲ್ಲೂ ಈ ಕ್ರಮ ಶೀಘ್ರ ಜಾರಿಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್