ಯೋಧರಿಗೆ ಎಫ್ ಬಿ ನಕಲಿ ಖಾತೆ ಹಾವಳಿ
Team Udayavani, Nov 2, 2020, 5:35 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಶತ್ರು ರಾಷ್ಟ್ರಗಳು ಸೈನ್ಯದ ಮಾಹಿತಿಗೆ ಕನ್ನ ಹಾಕಲು ಯತ್ನಿಸುತ್ತಿದ್ದು, ಯೋಧರು ಫೇಸ್ಬುಕ್ನ ನಕಲಿ ಖಾತೆಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಿಆರ್ಪಿಎಫ್ ಮುನ್ಸೂಚನೆ ರವಾನಿಸಿದೆ.
ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಆರ್ಪಿಎಫ್), ಜಮ್ಮು- ಕಾಶ್ಮೀರ ಮತ್ತು ರೆಡ್ ಝೋನ್ ಪೋಸ್ಟ್ಗಳ ಯೋಧರಿಗೆ ಈ ಕುರಿತಾಗಿ ಪತ್ರ ಬರೆದಿದೆ. “ಸಾಮಾಜಿಕ ವಿರೋಧಿ ವಿಚಾರ ಬಿತ್ತಲು ದುಷ್ಕರ್ಮಿಗಳು ಸೈನಿಕರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುತ್ತಿದ್ದಾರೆ. ಭದ್ರತಾಪಡೆಗಳ ಕುರಿತಾದ ವಿಶ್ವಾಸಾರ್ಹ ಮಾಹಿತಿಗಳನ್ನೂ ನಕಲಿ ಖಾತೆಗಳ ಮೂಲಕ ಕದಿಯಲು ಯತ್ನಿಸುತ್ತಿದ್ದಾರೆ’ ಎಂದು ಎಚ್ಚರಿಸಿದೆ. “ದುಷ್ಕರ್ಮಿಗಳು ನಕಲಿ ಖಾತೆ ಹೇಗೆ ಸೃಷ್ಟಿಸುತ್ತಾರೆ? ಇದನ್ನು ತಡೆಯಲು ಫೇಸ್ಬುಕ್ನಲ್ಲಿ ಯಾವ ಸೆಟ್ಟಿಂಗ್ ಅನುಸರಿಸಬೇಕು?’ ಎಂಬುದರ ಕುರಿತು ತಿಳಿವಳಿಕೆ ಮೂಡಿಸುವ ವೀಡಿಯೋವನ್ನೂ ಸಿಆರ್ಪಿಎಫ್ ಬಿಡುಗಡೆಗೊಳಿಸಿದೆ.
ಹಣಕ್ಕೆ ಡಿಮಾಂಡ್
ಕಳೆದ ಕೆಲವು ತಿಂಗಳಿಂದ ಕುಟುಂಬದ ಸದಸ್ಯರಿಗೆ ಯೋಧರ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ಗಳು ಹೋಗಿವೆ. ಯೋಧರ ಲೊಕೇಶನ್ ಕುರಿತಾದ ಮಾಹಿತಿ ಪಡೆಯಲೂ ಸೈಬರ್ ದುಷ್ಕರ್ಮಿಗಳು ಯತ್ನಿಸಿದ್ದಾರೆ. ಯೋಧರ ಕುಟುಂಬ ಸದಸ್ಯರು, ಸ್ನೇಹಿತರಿಂದ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಗಳೂ ಬೆಳಕಿಗೆ ಬಂದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ