ಫ್ಯಾಕ್ಟ್‌ ಚೆಕ್‌: ಪತಂಜಲಿ ʼಬೀಫ್‌ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿಯತ್ತೇನು?

ಬಾಬಾ ರಾಮ್‌ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು.

Team Udayavani, Sep 21, 2022, 5:30 PM IST

ಫ್ಯಾಕ್ಟ್‌ ಚೆಕ್‌: ಪತಂಜಲಿ ʼಬೀಫ್‌ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿತ್ತೇನು?

ವೈರಲ್‌ ಆದ ಫೋಟೋ

ನವದೆಹಲಿ: ಭಾರತದಲ್ಲಿ ಗೋವಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಅಲ್ಲದೇ ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿದೆ. ಏತನ್ಮಧ್ಯೆ ಪತಂಜಲಿಯ ಬೀಫ್ ಬಿರಿಯಾನಿ ಎಂಬ ಉತ್ಪನ್ನವೊಂದು ವೈರಲ್ ಆಗುತ್ತಿದೆ.

ಇಂದು ಆನ್ಲೈನ್‌ ನಲ್ಲಿ ಯಾವ ಆಹಾರವನ್ನು, ಅದಕ್ಕೆ ಸಂಬಂಧಪಟ್ಟ ಮಸಾಲೆಯನ್ನು ಕ್ಷಣ ಮಾತ್ರದಲ್ಲಿ ಆರ್ಡರ್‌ ಮಾಡಬಹುದು. ಯೋಗ ಗುರು ರಾಮದೇವ್‌ ಅವರ ಪತಂಜಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಸ್ಯಹಾರಿ, ಗೋವಿನ ತುಪ್ಟ, ಪತಂಜಲಿ ಪೇಸ್ಟ್, ಸೇರಿದಂತೆ ಹಲವಾರು ಉತ್ಪನ್ನಗಳನ್ನು ಪತಂಜಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ʼಬೀಫ್‌ ಬಿರಿಯಾನಿʼ ಎನ್ನುವ ಮಸಾಲೆ ಉತ್ಪನ್ನದ ಫೋಟೋವೊಂದು ಫಾರ್ವಡ್‌ ಆಗುತ್ತಿದೆ. ಇದರ ಮೇಲೆ ರಾಮ್‌ ದೇವ್‌ ಅವರ ಪತಂಜಲಿ ಪ್ರಾಡಕ್ಟ್ ಎಂದು ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಬಾಬಾ ರಾಮ್‌ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು. ಕೆಲವರು ʼಬೀಫ್‌ ಬಿರಿಯಾನಿʼ ಉತ್ಪನ್ನದ ಫೋಟೋವನ್ನು ನೋಡಿ ರಾಮ್ ದೇವ್‌ ಅವರನ್ನು‌ ಸೋಶಿಯಲ್‌ ಮೀಡಿಯಾದಲ್ಲಿ ಟೀಕಿಸುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ ನಲ್ಲಿ ಬಯಲಾಯಿತು ಅಸಲಿಯತ್ತು:

ಟ್ವಿಟರ್‌ ಹಾಗೂ ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರಾಮ್‌ ದೇವ್‌ ಬ್ರ್ಯಾಂಡ್‌ ನೇಮ್‌ ನೊಂದಿಗೆ ಪತಂಜಲಿ ಅವರ ʼಬೀಫ್‌ ಬಿರಿಯಾನಿʼ ಮಸಾಲೆ ಮಿಶ್ರಿತ ಪ್ರಾಡಕ್ಟ್ ನ ಅಸಲಿಯತ್ತನ್ನು ಪರಿಶೀಲಿಸಲು ಹೊರಟ ಇಂಡಿಯಾ ಟುಡೇ ಫ್ಯಾಕ್ಟ್‌ ಚೆಕ್‌  ತಂಡ ʼಬೀಫ್‌ ಬಿರಿಯಾನಿʼ ಯ ಅಸಲಿ ಕಹಾನಿಯನ್ನು ಬಯಲು ಮಾಡಿದೆ.

ಮೊದಲಿಗೆ ಬಾಕ್ಸ್‌ ನ ಬ್ರ್ಯಾಂಡಿಂಗ್‌  ಬಾಕ್ಸ್‌  ನ ಬದಿ ಮುಂದಿನ ಭಾಗದಿಂದ ಭಿನ್ನವಾಗಿ ಇರುವುದು ಗೊತ್ತಾಗಿದೆ. ಗೂಗಲ್‌ ಲೆನ್ಸ್‌ ಮೂಲಕ ಫೋಟೋವನ್ನು ಸ್ಕ್ಯಾನ್‌ ಮಾಡಿ ನೋಡಿದಾಗ, ಅದೇ ರೀತಿಯ ಫೋಟೋ ಬಂದಿದೆ. ಅಮೆಜಾನ್‌ ಆನ್ಲೈನ್‌ ಆರ್ಡರ್‌ ಮಾಡುವ ಸೈಟ್‌ ನಲ್ಲಿ ಬಂದಿರುವ ಹಲವು ಫೋಟೋಗಳಲ್ಲಿ ಎಲ್ಲೂ ಕೂಡ ರಾಮ್‌ ದೇವ್‌ ಹೆಸರುಳ್ಳ ʼಬೀಫ್‌ ಬಿರಿಯಾನಿʼ ಎಂಬ ಉತ್ಪನ್ನ ಕಂಡಿಲ್ಲ. ಕಂಡದ್ದು ನ್ಯಾಷನಲ್‌ ಫುಡ್ ಕಂಪೆನಿಯ‌ ಬೀಫ್‌ ಬಿರಿಯಾನಿಯ ಪ್ರಾಡಕ್ಟ್ ಗಳು. ಬಳಿಕ ನ್ಯಾಷನಲ್‌ ಫುಡ್‌ ಕಂಪೆನಿಯ ಸೈಟ್‌ ನಲ್ಲಿ ನೋಡಿದಾಗ ಅಲ್ಲಿದ್ದ ಬೀಫ್‌ ಬಿರಿಯಾನಿ ಬ್ರ್ಯಾಂಡಿಂಗ್‌ ಫೋಟೋಗಳು ಹಾಗೂ ಇಂಟರ್‌ ನೆಟ್‌ ನಲ್ಲಿ ಶೇರ್‌ ಆದ ಫೋಟೋ ಕೂಲಂಕಷವಾಗಿ ಹೋಲಿಕೆ ಮಾಡಿ ನೋಡಿದಾಗ ಫ್ಯಾಕ್ಟ್‌ ಚೆಕ್‌ ತಂಡಕ್ಕೆ, ನ್ಯಾಷನಲ್‌ ಫುಡ್‌ ಕಂಪೆನಿ ಉತ್ಪನ್ನಕ್ಕೆ ರಾಮ್‌ ದೇವ್‌ ಹಾಗೂ ಪತಂಜಲಿ ಹೆಸರನ್ನು ಎಡಿಟ್ ಮಾಡಿ ಹಾಕಿರುವುದು ಬೆಳಕಿಗೆ ಬಂದಿದೆ.

ನ್ಯಾಷನಲ್‌ ಫುಡ್‌ ಕಂಪೆನಿಯ ಹಿನ್ನೆಲೆಯನ್ನು ನೋಡಿದಾಗ ಇದು ಪಾಕಿಸ್ತಾನದ ಮೂಲದ ಕಂಪೆನಿಯೆಂದು ತಿಳಿದು ಬಂದಿದೆ. 1970 ರಲ್ಲಿ ಆರಂಭವಾದ ಈ ಕಂಪೆನಿ ಇಂದು 13  ರಾಷ್ಟ್ರಗಳಿಗೆ ಆಹಾರ ಉತ್ಪನ್ನ ಸರಬರಾಜು ಮಾಡುವ ಕಂಪೆನಿಯಾಗಿ ಬೆಳೆದಿದೆ.

ಪತಂಜಲಿ ಉತ್ಪನ್ನವನ್ನು ನೋಡಿದ ಫ್ಯಾಕ್ಟ್‌ ಚೆಕ್‌ ತಂಡಕ್ಕೆ ಅಲ್ಲಿ ಪೌಡರ್‌ ಮಿಶ್ರಿತ ಉತ್ಪನ್ನಗಳು ಕಂಡು ಬಂದಿತ್ತೇ ವಿನಃ ಈ ರೀತಿಯ ಯಾವುದೇ ಪ್ರಾಡಕ್ಟ್ ಸಿಕ್ಕಿಲ್ಲ. ಈ ಫೋಟೋವನ್ನು ಯಾರೋ ಎಡಿಟ್‌ ಮಾಡಿ ವೈರಲ್‌ ಮಾಡಿದ್ದಾರೆ ಎನ್ನುವುದು ಫ್ಯಾಕ್ಟ್‌ ಚೆಕ್‌ ಮೂಲಕ ತಿಳಿದು ಬಂದಿದೆ.

ಟಾಪ್ ನ್ಯೂಸ್

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… ೩ ಮೃತ್ಯು, ೧೪ ಮಂದಿಗೆ ಗಾಯ

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… 3 ಮೃತ್ಯು, 14 ಮಂದಿಗೆ ಗಾಯ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ… ಅಧಿಕಾರಿಗಳಿಂದ ಕಾರ್ಯಾಚರಣೆ

Leopard: ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ… ಅಧಿಕಾರಿಗಳಿಂದ ಕಾರ್ಯಾಚರಣೆ

ಪ್ರವಾಸೋದ್ಯಮ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… ೩ ಮೃತ್ಯು, ೧೪ ಮಂದಿಗೆ ಗಾಯ

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… 3 ಮೃತ್ಯು, 14 ಮಂದಿಗೆ ಗಾಯ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು

Gun ಹಿಡಿದು ರೈತರನ್ನು ಬೆದರಿಸಿದ ಪ್ರಕರಣ: ಪೂಜಾ ಖೇಡ್ಕರ್ ತಾಯಿ ವಿರುದ್ಧ FIR

Gun ಹಿಡಿದು ರೈತರನ್ನು ಬೆದರಿಸಿದ ಪ್ರಕರಣ: ಪೂಜಾ ಖೇಡ್ಕರ್ ಪೋಷಕರ ವಿರುದ್ಧ FIR

Bypoll: INDIA Vs BJP ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಮತ ಎಣಿಕೆ ಆರಂಭ

Bypoll: INDIA Vs BJP ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಮತ ಎಣಿಕೆ ಆರಂಭ

MUST WATCH

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

udayavani youtube

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸ ಸೇರ್ಪಡೆ

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… ೩ ಮೃತ್ಯು, ೧೪ ಮಂದಿಗೆ ಗಾಯ

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… 3 ಮೃತ್ಯು, 14 ಮಂದಿಗೆ ಗಾಯ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ; INDIA ಮೈತ್ರಿಕೂಟಕ್ಕೆ ಮೇಲುಗೈ

ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ… ಅಧಿಕಾರಿಗಳಿಂದ ಕಾರ್ಯಾಚರಣೆ

Leopard: ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ… ಅಧಿಕಾರಿಗಳಿಂದ ಕಾರ್ಯಾಚರಣೆ

ಪ್ರವಾಸೋದ್ಯಮ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.