ಅಸ್ಸಾಮ್ನಲ್ಲಿ 2,000 ರೂ. ಗಳ 4.4 ಲಕ್ಷ ರೂ. ನಕಲಿ ನೋಟು ಪತ್ತೆ
Team Udayavani, Mar 17, 2017, 4:30 PM IST
ಗುವಾಹಟಿ : ಭಾರತ – ಬಾಂಗ್ಲಾದೇಶದ ಗಡಿಗೆ ತಾಗಿಕೊಂಡಿರುವ ಅಸ್ಸಾಂ ನ ಧೂಬ್ರಿ ಜಿಲ್ಲೆಯ ಗ್ರಾಮವೊಂದರಲ್ಲಿ ಬಿಎಸ್ಎಫ್ ಸಿಬಂದಿಗಳು 4.4 ಲಕ್ಷ ರೂ. ಮುಖಬೆಲೆಯ 2,000 ರೂ.ಗಳ ಭಾರತೀಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಗುರುವಾರ ರಾತ್ರಿ ಖುಶ್ನಿಮಾರಾ ಗ್ರಾಮದಲ್ಲಿ ಕೈಗೊಳ್ಳಲಾಗಿದ್ದ ಕಾರ್ಯಾಚರಣೆಯಲ್ಲಿ 2,000 ರೂ.ಗಳ 220 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು.
ಕೊರಿಯರ್ನಲ್ಲಿ ಬಂದ ನಕಲಿ ನೋಟುಗಳ ಈ ಕಟ್ಟು ಬಾಂಗ್ಲಾದೇಶದಿಂದ ರವಾನೆಯಾಗಿದ್ದು ಧೂಬ್ರಿಯಲ್ಲಿ ಯಾರೋ ಒಬ್ಬರಿಗೆ ತಲುಪುವುದಿತ್ತು. ಕೊರಿಯರ್ ಹುಡುಗ ಈ ಪಾರ್ಸೆಲ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ವಶಕ್ಕೆ ತೆಗೆದುಕೊಳ್ಳಲಾದ ನಕಲಿ ನೋಟುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್