ಪಾಕ್ನಿಂದ ಸುಳ್ಳು ಸುದ್ದಿಗಳದ್ದೇ ಯುದ್ಧ!
Team Udayavani, Feb 28, 2019, 12:30 AM IST
ಭಾರತೀಯ ಪಡೆ ನಡೆಸಿದ ಮಂಗಳವಾರ ವೈಮಾನಿಕ ದಾಳಿಗೆ ಬೆದರಿಗೆ ಪಾಕಿಸ್ತಾನ, ಬುಧವಾರ ಬೆಳಗ್ಗಿನಿಂದಲೇ ಒಂದಲ್ಲ ಒಂದು ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿತ್ತು. ಭಾರತದ ಮಿಗ್ 21 ವಿಮಾನ ಪತನವಾಗಿರುವ ಬಗ್ಗೆ ಪಾಕ್ ಸರ್ಕಾರ ಘೋಷಿಸುವುದಕ್ಕೂ ಮುನ್ನವೇ, ಅಲ್ಲಿನ ಮಾಧ್ಯಮಗಳು ಹಳೆಯ ವಿಮಾನ ಅಪಘಾತದ ಚಿತ್ರಗಳನ್ನು ಪ್ರಕಟಿಸಲು ಆರಂಭಿಸಿದ್ದವು. ಇರಾನ್ ಮೂಲದ ಪ್ರಸ್ ಟಿವಿ ಎಂಬ ಸುದ್ದಿಸಂಸ್ಥೆ ಈ ಚಿತ್ರ ಪ್ರಕಟಿಸಿತ್ತು. ನಂತರ ಪಾಕಿಸ್ತಾನದ ಮಾಧ್ಯಮಗಳು ಅದನ್ನೇ ಅನುಸರಿಸಿದವು. ಟ್ವಿಟರ್, ಫೇಸ್ಬುಕ್ನಲ್ಲೂ ಇವು ಹರಿದಾಡಿದವು. ಇವುಗಳ ನಿಜ ಪರೀಕ್ಷೆ ಮಾಡಿದಾಗ ಇವು 2015ರಲ್ಲಿ ಒಡಿಶಾದಲ್ಲಿ ಅಪಘಾತ ಕ್ಕೀಡಾದ ಜೆಟ್ ಟ್ರೇನರ್ ಎಂಬುದು ಬಹಿರಂಗವಾಯಿತು. ಇನ್ನೊಂದು ಚಿತ್ರ ಕೂಡ ಗುಜರಾತ್ನಲ್ಲಿ 2018 ಅಪಘಾತಕ್ಕೀಡಾಗಿದ್ದ ವಿಮಾನದ್ದಾಗಿತ್ತು. ಇದಾಗಿ ಎಷ್ಟೋ ಗಂಟೆಗಳ ನಂತರ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಿಗ್ 21 ವಿಮಾನ ಕಳೆದಿದ್ದನ್ನು ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ