
ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ
ಕಿಸಾನ್ ಗಣತಂತ್ರ ಮೆರವಣಿಗೆ'ಯನ್ನು ಗಮನದಲ್ಲಿಟ್ಟುಕೊಂಡು ಭಾರಿ ಭದ್ರತೆ ನಿಯೋಜನೆ
Team Udayavani, Jan 26, 2021, 12:27 PM IST

ನವ ದೆಹಲಿ : ಸಿಂಘು ಮತ್ತು ಟಿಕ್ರಿ ಗಡಿ ಕೇಂದ್ರ ಭಾಗದಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾ ನಿರತ ಸಾವಿರಾರು ರೈತರು ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವಾಗ ಪೊಲೀಸರ ಬ್ಯಾರಿಕೇಡ್ ಗಳನ್ನು ಮುರಿದು ಬಂದಿದ್ದಾರೆ ಎಂದು ವರದಿಯಾಗಿದೆ.
ರಾಜ್‌ಪತ್ ನಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆ ಮುಕ್ತಾಯಗೊಂಡ ನಂತರ ದೆಹಲಿಯಲ್ಲಿ ತಮ್ಮ ಟ್ರ್ಯಾಕ್ಟರ್ ಪೆರೇಡ್ ನಡೆಸಲು ಅನುಮತಿ ನೀಡಲಾಗಿದೆ ಎಂದು ಭದ್ರತಾ ಸಿಬ್ಬಂದಿ ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಕೂಡ ರೈತರು ಕೇಳದೇ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಹೊರ ರಿಂಗ್ ರೋಡ್ ನತ್ತ ಸಾಗಲು ಪ್ರಯತ್ನಿಸಿದರು” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಓದಿ : ಪ್ರಚೋದನೆಯಿಂದ ರೈತರ ಪರೇಡ್ ನಡೆದಿದೆ: ಬಿ.ಸಿ ಪಾಟೀಲ್
ಬ್ಯಾರಿಕೇಡ್ ಗಳನ್ನು ಮುರಿದವರು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಗೆ ಸೇರಿದವರು. ಪೊಲೀಸರು ರೈತರಿಗೆ ಅನುವು ಮಾಡಿಕೊಟ್ಟ ನಂತರ ಸಂಯುಕ್ತ ಕಿಸಾನ್ ಮೋರ್ಚಾದ ಟ್ರ್ಯಾಕ್ಟರ್ ಪರೇಡ್ ನಿಗದಿಯಂತೆ ಪ್ರಾರಂಭವಾಗಲಿದೆ ಎಂದು ದೆಹಲಿಯ ಹಲವಾರು ಗಡಿ ಕೇಂದ್ರಗಳಲ್ಲಿ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ 41 ರೈತ ಸಂಘಗಳ ಒಕ್ಕೂಟ “ಸಂಯುಕ್ತ ಕಿಸಾನ್ ಮೋರ್ಚಾ”ದ ಸದಸ್ಯರೊಬ್ಬರು ಹೇಳಿದ್ದಾರೆ.
ಓದಿ : ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಅಪ್ಲಿಕೇಶನ್ ಗಳಿಗೆ ಶಾಶ್ವತ ನಿಷೇಧ
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು ಗಣರಾಜ್ಯೋತ್ಸವದಂದು ದೆಹಲಿಯ ಕಾರ್ಯನಿರತ ಹೊರ ರಿಂಗ್ ರೋಡ್ ನಲ್ಲಿ ತಮ್ಮ ಮೆರವಣಿಗೆಯನ್ನು ನಡೆಸುವುದಾಗಿ ಸೋಮವಾರ(ಜ.25) ಘೋಷಿಸಿತ್ತು. ಮಾತ್ರವಲ್ಲದೇ, ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಲು ಸಂಸತ್ತಿಗೆ ಪಾದ ಯಾತ್ರೆಯನ್ನು ಕೂಡ ಮಾಡುತ್ತೇವೆ ಎಂದು ಘೋಷಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿ ಕೇಂದ್ರಗಳಿಂದ ದೆಹಲಿಗೆ ತೆರಳಲಿರುವ ‘ಕಿಸಾನ್ ಗಣತಂತ್ರ ಮೆರವಣಿಗೆ’ಯನ್ನು ಗಮನದಲ್ಲಿಟ್ಟುಕೊಂಡು ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಓದಿ : ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲ್ಲ: ಸ್ಪೀಕರ್ ಪಟೋಲೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಫೀಡರ್ ಬಸ್ ಸೇವೆ ಆರಂಭಕ್ಕೆ ಚಿಂತನೆ; ಹಳೇ ಬಸ್ ವಿನ್ಯಾಸಗೊಳಿಸಿ ಬಳಕೆ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಅರವಿಂದ ಬೋಳಾರ್

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಬಂದಿಳಿದದ್ದು ಮಾತ್ರ ದುಬೈಯಲ್ಲೇ…

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ