ಪಾಕಿಸ್ಥಾನಕ್ಕೆ ಎಫ್ಎಟಿಎಫ್ ಚಾಟಿ
Team Udayavani, Jun 22, 2019, 5:00 AM IST
ಹೊಸದಿಲ್ಲಿ: ಉಗ್ರರ ವಿರುದ್ಧ ಪಾಕಿಸ್ಥಾನ ಕಠಿನ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಹಣಕಾಸು ಚಟುವಟಿಕೆ ವಿಚಕ್ಷಣಾ ಪಡೆ (ಎಫ್ಎಟಿಎಫ್) ಸಭೆಯಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಆಕ್ಷೇಪ ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ. ಹಣಕಾಸು ಚಟುವಟಿಕೆ ವಿಚಕ್ಷಣಾ ಪಡೆ (ಎಫ್ಎಟಿಎಫ್) ಸಭೆ ಫ್ಲೋರಿಡಾದಲ್ಲಿ ನಡೆದಿದ್ದು, ಪಾಕಿಸ್ಥಾನವು ಉಗ್ರರ ವಿರುದ್ಧ ಕ್ರಮ ತೆಗೆದು ಕೊಳ್ಳಲು ಆಸಕ್ತಿ ವಹಿಸದ ಬಗ್ಗೆ ಹಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆ ಯಿಂದ ನಿಷೇಧಕ್ಕೊಳಗಾಗಿದ್ದರೂ ಉಗ್ರ ಹಫೀಜ್ ಸಯೀದ್ ಹಾಗೂ ಮಸೂದ್ ಅಜರ್ ವಿರುದ್ಧ ಯಾವುದೇ ಕಠಿಣ ಕ್ರಮ ವನ್ನು ಪಾಕಿಸ್ಥಾನ ಕೈಗೊಂಡಿಲ್ಲ ಎಂಬುದಾಗಿ ಸದಸ್ಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಆದರೆ ಎಫ್ಎಟಿಎಫ್ ಗ್ರೇ ಲಿಸ್ಟ್ನಿಂದ ಪಾಕಿ ಸ್ತಾನವನ್ನು ತೆಗೆದು ಕಪ್ಪು ಪಟ್ಟಿಗೆ ಸೇರಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ