ದಿಲ್ಲಿ ಇಎಸ್‌ಐ ಆಸ್ಪತ್ರೆಯ ಆಪರೇಶನ್‌ ಥಿಯೇಟರ್‌ನಲ್ಲಿ ಬೆಂಕಿ : 6 ರೋಗಿಗಳ ಸ್ಥಳಾಂತರ

Team Udayavani, Jul 12, 2019, 11:08 AM IST

ಹೊಸದಿಲ್ಲಿ : ಇಂದು ಶುಕ್ರವಾರ ಬೆಳಗ್ಗೆ ಪಶ್ಚಿಮ ದಿಲ್ಲಿಯ ಬಸಾಯಿ ದಾರಾಪುರ ದಲ್ಲಿನ ಇಎಸ್‌ಐ ಆಸ್ಪತ್ರೆಯ ಆಪರೇಶನ್‌ ಥಿಯೇಟರ್‌ ನಲ್ಲಿ ಸಣ್ಣ ಪ್ರಮಾಣದ ಅಗ್ನಿ ದುರಂತ ಸಂಭವಿಸಿತು.

ಸುದ್ದಿ ತಿಳಿದು ಧಾವಿಸಿ ಬಂದು ಅಗ್ನಿ ಶಾಮಕ ದಳದ ಸಿಬಂದಿಗಳು ಆರು ರೋಗಿಗಳನ್ನು ಕೂಡಲೇ ಸ್ಥಳಾಂತರಿಸಿದರು.

ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಆಪರೇಶನ್‌ ಥಿಯೇಟರ್‌ ನ ಸೀಲಿಂಗ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಡನಯೇ ಅಲ್ಲಿದ್ದ ಆರು ಮಂದಿ ರೋಗಿಗಳನ್ನು ಸ್ಥಳಾಂತರಿಸಲಾಯಿತು ಎಂದು ಚೀಫ್ ಫೈರ್‌ ಆಫೀಸರ್‌ ಅತುಲ್‌ ಗರ್ಗ್‌ ತಿಳಿಸಿದರು.

ಬೆಳಗ್ಗೆ ಸುಮಾರು 9.25ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂಬುದನ್ನು ಈಗ ತಿಳಿಯಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ