ನಟಿ ದೀಪಿಕಾ ಅಪಾರ್ಟ್ಮೆಂಟ್ನಲ್ಲಿ ಬೆಂಕಿ, ಪದ್ಮಾವತ್ ನಟಿ ಸೇಫ್
Team Udayavani, Jun 13, 2018, 3:28 PM IST
ಮುಂಬಯಿ : ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಫ್ಲ್ಯಾಟ್ ಇರುವ ಬ್ಯೂಮಾಂಡ್ ಟವರ್ ಬಹು ಮಹಡಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಇಂದು ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.
ಮುಂಬಯಿಯ ಪ್ರಭಾವತಿಯಲ್ಲಿರುವ ಈ ಅಪಾರ್ಟ್ಮೆಂಟ್ ಕಟ್ಟಡದ ಬಿ-ವಿಂಗ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಂಕಿ ಅನಾಹುತ ಸಂಭವಿಸಿದಾಗ ದೀಪಿಕಾ ತನ್ನ ಫ್ಲ್ಯಾಟಿನಲ್ಲಿ ಇರಲಿಲ್ಲ ಎಂದು ಆಕೆಗೆ ನಿಕಟವಿರುವ ಮೂಲಗಳು ಹೇಳಿವೆ. ಆಕೆ ಬ್ರಾಂಡ್ ಒಂದರ ಶೂಟಿಂಗ್ಗಾಗಿ ಹೊರಗೆ ಹೋಗಿದ್ದರು.
ದೀಪಿಕಾ ಅವರ ಮನೆಗಾಗಲೀ ಕಚೇರಿಗಾಗಿ ಬೆಂಕಿ ತಾಗಿಲ್ಲ; ಬೆಂಕಿ ಕಂಡುಬಂದಿರುವುದು 32ನೇ ಅಂತಸ್ತಿನಲ್ಲಿ. ಅಗ್ನಿ ಶಾಮಕ ದಳದವರು ಈಗಾಗಲೇಅಲ್ಲಿಗೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಆಕೆಯ ಸಿಬಂದಿಗಳು ಫ್ಲ್ಯಾಟಿನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ದೀಪಿಕಾಗೆ ನಿಕಟವಿರುವ ಮೂಲಗಳು ತಿಳಿಸಿವೆ.
ಬೆಂಕಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ